ಮೊಡಂಕಾಪು ದೀಪಿಕಾ ಪ್ರೌಢಶಾಲೆಗೆ 60 ವರ್ಷ: ಕಾರ್ಯಕ್ರಮದ ರೂಪುರೇಷೆಗೆ ಸಮಾಲೋಚನೆ

nava
Published on

ಬಂಟ್ವಾಳ: ಮೊಡಂಕಾಪು ದೀಪಿಕಾ ಪ್ರೌಢಶಾಲೆ 60ನೇ ವರ್ಷಾಚರಣೆ ಸಂಭ್ರಮದಲ್ಲಿದ್ದು, ಡಿ.12ರಂದು ದಿನವಿಡೀ ಸಂಭ್ರಮಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಸಂಚಾಲಕ ಧರ್ಮಗುರು ವಲೇರಿಯನ್ ಡಿಸೋಜ ಹೇಳಿದರು.

ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ವಿದ್ಯಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳ ಸಂಘ, ಗ್ರಾಮಸ್ಥರ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಇದೇ ವೇಳೆ ವಿವಿಧ ಪ್ರಧಾನ ಸಮಿತಿ, ಉಪ ಸಮಿತಿ ರಚಿಸಿ ಅವರಿಗೆ ಜವಾಬ್ದಾರಿ ಹಂಚಿಕೆ ನಡೆಸಲಾಯಿತು.

ಟ್ರಸ್ಟಿ ವಕೀಲ ಅಶ್ವನಿ ಕುಮಾರ್ ರೈ ಮಾತನಾಡಿ, ಕಳೆದ 60 ವರ್ಷಗಳಲ್ಲಿ ಈ ಶಾಲೆಯಲ್ಲಿ ಕಲಿತು ವಿವಿಧೆಡೆ ಉದ್ಯೋಗದಲ್ಲಿರುವ ಹಿರಿಯ ವಿದ್ಯಾರ್ಥಿಗಳು ಮತ್ತು ಪಾಲಕರು ಅಂದು ಕಡ್ಡಾಯವಾಗಿ ಭಾಗವಹಿಸಲು ವಿನಂತಿಸಲಾಗಿದೆ ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ ಸಾಲಿಯಾನ್ ಮಾತನಾಡಿ, ಈಗಾಗಲೇ ಕೆಲವೊಂದು ದಾನಿಗಳ ನೆರವಿನಲ್ಲಿ ಶಾಲೆಗೆ ಸುಣ್ಣ-ಬಣ್ಣ ಸಹಿತ ವಿವಿಧ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂದರು.

ಇನ್ಫೆಂಟ್ ಕನ್ನಡ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ತೆರೆಸಾ ಡಿಮೆಲ್ಲೊ, ಪ್ರಮುಖರಾದ ಮಹಮ್ಮದ್ ವಳವೂರು, ಸುನೀಲ್ ವೇಗಸ್, ಬಿ.ಸತೀಶ ಭಂಡಾರಿ, ಸದಾಶಿವ ಬಂಗೇರ, ಕೆ.ಎಚ್.ಅಬೂಬಕ್ಕರ್ ಮತ್ತಿತರರು ಸಲಹೆ ನೀಡಿದರು.

ಮುಖ್ಯಶಿಕ್ಷಕ ಸಾಧು ಮೂಡುಬಿದಿರೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net