ಹಬ್ಬದ ವಿಶೇಷ ರೈಲು

images
Published on


ಮಂಗಳೂರು : ಹಬ್ಬದ ಸಂದರ್ಭ ಪ್ರಯಾಣಿಕರ ಸೌಲಭ್ಯಕ್ಕಾಗಿ ಮಂಗಳೂರು ಜಂಕ್ಷನ್-ಕೊಚುವೇಲಿ ಮಧ್ಯೆ ವಿಶೇಷ ರೈಲು ಓಡಾಟ ನಡೆಸಲಿದೆ.
ಕೊಚುವೇಲಿ -ಮಂಗಳೂರು ಜಂಕ್ಷನ್ ಸ್ಪೆಷಲ್ ಎಕ್ಸ್‌ಪ್ರೆಸ್ (ನಂ.06157) ಅ.14ರಂದು ರಾತ್ರಿ 9.15ಕ್ಕೆ ಕೊಚುವೇಲಿಯಿಂದ ಹೊರಡಲಿದ್ದು ಮರುದಿನ ಬೆಳಗ್ಗೆ 9.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರು ಜಂಕ್ಷನ್-ಕೊಚುವೇಲಿ ಸ್ಪೆಷಲ್ ಎಕ್ಸ್‌ಪ್ರೆಸ್ (ನಂ.06158) ಅ.15ರಂದು ರಾತ್ರಿ 8.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು ಮರುದಿನ ಬೆಳಗ್ಗೆ 8ಕ್ಕೆ ಕೊಚುವೇಲಿ ತಲುಪಲಿದೆ. ಈ ರೈಲು 14 ಸೆಕೆಂಡ್ ಕ್ಲಾಸ್ ಕೋಚ್, 1 ಜನರೇಟರ್ ಕಾರ್ ಮತ್ತು 1 ಸೆಕೆಂಡ್ ಕ್ಲಾಸ್ ಲಗ್ಗೇಜ್ ಕಂ ಬ್ರೇಕ್ ವ್ಯಾನ್ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
..............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net