ನಂಜನಗೂಡು: ತಾಲೂಕಿನ ಪರಿಶಿಷ್ಟ ಜನಾಂಗದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವ ನಾರಾಯಣ ಹೇಳಿದರು.

ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಅರಿಯೂರು ಹಾಗೂ ಹೊಸ ಕಡಜಟ್ಟಿ ಗ್ರಾಮಗಳ ಪರಿಶಿಷ್ಟ ಜನಾಂಗದ ಬೀದಿಗಳಿಗೆ ತಲಾ ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಇವರಿಗೆ ತಾಲೂಕಿಗೆ 500 ಕೋಟಿ ರೂ. ಅನುದಾನ ಬಂದಿದೆ. ಪಂಚಗ್ಯಾರಂಟಿ ಜತೆಗೆ ಅಭಿವೃದ್ಧಿಗಳು ಸಾಕಷ್ಟು ನಡೆಯುತ್ತಿವೆ. ಹೊಸ ಕಡಜಟ್ಟಿ ಗ್ರಾಮದ ಸಮುದಾಯ ಭವನ ಹಾಗೂ ದೇವಸ್ಥಾನದ ಕಾಂಪೌಂಡ್ ಕಾಮಗಾರಿಯನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ನಾಗೇಶ್‌ರಾಜ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಮಾರುತಿ, ರೈತ ಮುಖಂಡ ಕೆ.ರಾಜಣ್ಣ, ಗ್ರಾಪಂ ಅಧ್ಯಕ್ಷ ಹರೀಶ್ ಕುಮಾರ್, ನಗರ ಅಧ್ಯಕ್ಷ ಶಂಕರ್, ಕಂದೇಗಾಲ ಕೃಷ್ಣಮೂರ್ತಿ, ಯುವ ಘಟಕದ ಹಾಡ್ಯ ಆದರ್ಶ, ವಿಜಯಕುಮಾರ್ ಇತರರು ಇದ್ದರು.