ನರೇಂದ್ರ ಮೋದಿ ಹುಟ್ಟಿದ್ದೆ ಈ ದೇಶವನ್ನ ಹಿಂದೂರಾಷ್ಟ್ರ ಮಾಡೋಕೆ: ಶಾಸಕ ಯತ್ನಾಳ್

1326180
Published on

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಹುಟ್ಟಿರೋದೆ ಭಾರತವನ್ನು ಹಿಂದೂರಾಷ್ಟ್ರ ಮಾಡಲು ಎಂದು ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ವಿಜಯಪುರದ ಸಿದ್ದೇಶ್ವರ ದೇವಸ್ಥಾನ ಮುಂಭಾಗ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ವೇದಿಕೆ ಮೇಲೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಂದೂಗಳು ಹೆಚ್ಚಿರೋದು ಹಿಂದು ರಾಷ್ಟ್ರ, ಮುಸ್ಲಿಂರು ಹೆಚ್ಚಿರೋದು ಪಾಕಿಸ್ತಾನ ಎಂದರು.

ಪುಣ್ಯಾತ್ಮ ಮಹಾತ್ಮ ಗಾಂಧಿ ಇದೇ ರೀತಿ ದೇಶ ಒಡೆದುಕೊಟ್ಟಿದ್ದಾರೆ. ಪಾಕಿಸ್ತಾನ ಯಾಕೆ ಒಡೆದುಕೊಟ್ರೋ ಗೊತ್ತಿಲ್ಲ. ಆ ಪುಣ್ಯಾತ್ಮ ಮಾಡಿದ ತಪ್ಪಿನಿಂದ ಕೋಟ್ಯಾಂತರ ಹಿಂದೂಗಳು ಪ್ರಾಣ ಕಳೆದುಕೊಂಡಿದ್ದಾರೆ.

ಪಾಕಿಸ್ತಾನಕ್ಕೆ 50 ಕೋಟಿ ರುಪಾಯಿ ನೀಡುವಂತೆ ಗಾಂಧಿಜೀ ಉಪವಾಸ ಕುಳಿತಿದ್ರು. ಇವರು ದೊಡ್ಡವರಾಗೋಕೆ ಕೋಟ್ಯಾಂತರ ಹಿಂದೂಗಳ ರಕ್ತಪಾತವಾಯಿತು. ಮುಂದೇ ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರವೇ ಭಾರತದ ವಶವಾಗಲಿದೆ. ಪ್ರಧಾನಿ ಮೋದಿ ಅಂತಹ ನಾಯಕರ ಇರುವಾಗ ಇದು ಸಾಧ್ಯವಿದೆ ಎಂದು ಪ್ರಧಾನಿ ಕೊಂಡಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net