ಧರೆ ಕುಸಿದ ಪ್ರದೇಶಗಳಿಗೆ ಶಾಸಕಿ ಭೇಟಿ

New Project (8)
Published on

ಕಡಬ: ಕೊಯಿಲ ಗ್ರಾಮದ ಎರ್ಮಡ್ಕ ಎಂಬಲ್ಲಿ ಮೇ 30ರಂದು ಸುರಿದ ಧಾರಾಕಾರ ಮಳೆಗೆ ಸೇತುವೆಯ ತಡೆಗೋಡೆ ಕುಸಿದು ಬೃಹತ್ ತೋಡಿನ ಪಕ್ಕದ ಮನೆ ಅಪಾಯಕಾರಿ ಸ್ಥಿತಿಯಲ್ಲಿರುವ ಪ್ರದೇಶ, ಇದೇ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಂಚಿನ ಮಣ್ಣು ಪಕ್ಕದ ತೋಡಿಗೆ ಕುಸಿದ ಸ್ಥಳ ಹಾಗೂ ಧರೆ ಕುಸಿದ ಪ್ರದೇಶಗಳಿಗೆ ಮಂಗಳವಾರ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈಗಾಗಲೇ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲ ವರ್ಗೀಸ್ ಅವರಿಗೆ ಸಾರ್ವಜನಿಕ ಪ್ರದೇಶದಲ್ಲಿ ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಪ್ರದೇಶಕ್ಕೂ ಆಯುಕ್ತರು ಭೇಟಿ ಪರಿಶೀಲನೆ ನಡೆಸಿದ ವರದಿ ಆಧಾರದಲ್ಲಿ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷಿಕ ಸಮಾಜ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೊಯಿಲ ಶಕ್ತಿ ಕೇಂದ್ರದ ಅಧ್ಯಕ್ಷ ರವಿ ಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ನಾಯ್ಕ ಏಣಿತ್ತಡ್ಕ, ಚಾರ್ವಾಕ ಸಿಎ ಬ್ಯಾಂಕ್ ಅಧ್ಯಕ್ಷ ಗಣೇಶ್ ಉದನಡ್ಕ, ಜಿಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸ್ಥಳೀಯರಾದ ಧನಂಜಯ ಎರ್ಮಡ್ಕ, ಗಣೇಶ್ ಎರ್ಮಡ್ಕ, ನಿರಂಜನ ನಾಯ್ಕ ಏಣಿತಡ್ಕ, ನೇತ್ರಾಕ್ಷ ಏಣಿತ್ತಡ್ಕ, ಸುಂದರ ನಾಯ್ಕ ಚೆಕ್ಕಿತ್ತಡ್ಕ, ಬಾಲಕೃಷ್ಣ ನಾಯ್ಕ ಏಣಿತ್ತಡ್ಕ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net