

ಬ್ರಹ್ಮಾವರ: ಇತ್ತೀಚೇಗೆ ನಡೆದ ಪಾಕಿಸ್ತಾನ ಯುದ್ಧದಲ್ಲಿ ನಮ್ಮ ಊರಿನವರೂ ಭಾಗವಹಿಸಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನದ ಸೇನಾ ನೆಲೆಯನ್ನು ಧ್ವಂಸಗೊಳಿಸಿದ ನಮ್ಮ ಸೇನೆಯಲ್ಲಿದ್ದು, ಭಾರತದ ಗೆಲುವಲ್ಲಿ ಶ್ರಮಿಸಿದ ಬ್ರಹ್ಮಾವರ ಬಳಿಯ ಮಟಪಾಡಿಯ ಚರಣ್ ಪೂಜಾರಿ ಅವರನ್ನು ಶನಿವಾರ ಮಟಪಾಡಿಯ ಅವರ ಮನೆಗೆ ತೆರಳಿ ಶಾಸಕರ ನೆಲೆಯಲ್ಲಿ ಗೌರವಿಸಿ, ಸನ್ಮಾನಿಸಿ ಮಾತನಾಡಿದರು.
ಚರಣ್ ಪೂಜಾರಿ ಅವರ ತಂದೆ ಭೋಜ ಪೂಜಾರಿ, ತಾಯಿ ಸರೋಜ ಪೂಜಾರಿ ಮತ್ತು ಪ್ರಮುಖರಾದ ರಾಜೀವ ಕುಲಾಲ್, ಬಿರ್ತಿ ರಾಜೇಶ್ ಶೆಟ್ಟಿ, ಸೂರ್ಯನಾರಾಯಣ ಗಾಣಿಗ, ರುಪತಿ ಬ್ರಹ್ಮಾವರ, ಕರ್ಜೆ ಬಾಲಕೃಷ್ಣ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಮಟಪಾಡಿ, ಅಶೋಕ ಪೂಜಾರಿ, ರವ್ಯಾ, ಹಂದಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭಾ ಪೂಜಾರಿ, ಪವಿತ್ರ ನಾಯಕ್, ಉದಯ ಪೂಜಾರಿ, ಪದ್ಮಾವತಿ, ಸುಮತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.