

ಹೆಬ್ರಿ: ಜಿಪಂ ಉಡುಪಿ, ತಾಪಂ ಹೆಬ್ರಿ, ಮಂಗಳೂರು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹೆಬ್ರಿ, ಹಾಲು ಉತ್ಪಾದಕರ ಸಹಕಾರಿ ಸಂಘ ಕುಚ್ಚೂರು ಸಹಯೋಗದಲ್ಲಿ ಮಿಶ್ರ ತಳಿ ಹಸು ಮತ್ತು ಕರುಗಳ ಪ್ರದರ್ಶನ ಬುಧವಾರ ಕುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘ ವಠಾರದಲ್ಲಿ ನಡೆಯಿತು.
ಸಭಾಕಾರ್ಯಕ್ರಮವನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಡುಪಿ ಉಪನಿರ್ದೇಶಕ ಡಾ.ಎಂ.ಸಿ.ರೆಡ್ಡಪ್ಪ ಉದ್ಘಾಟಿಸಿದರು. ಮಿಶ್ರ ತಳಿ ಹಸು ಮತ್ತು ಕರುಗಳ ಪ್ರದರ್ಶನವನ್ನು ಕುಚ್ಚೂರು ಗ್ರಾಪಂ ಅಧ್ಯಕ್ಷೆ ಶಶಿಕಲಾ ನಾಯ್ಕ ಉದ್ಘಾಟಿಸಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಉಪವ್ಯವಸ್ಥಾಪಕ ಡಾ.ಧನಂಜಯ, ಕುಚ್ಚೂರು ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು, ಕುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಮಹೇಶ್ ಶೆಟ್ಟಿ ಕಾನ್ಬೆಟ್, ಉಪಾಧ್ಯಕ್ಷ ಜಯರಾಮ ಶೆಟ್ಟಿ ಕಾನ್ಬೆಟ್, ನಿರ್ದೇಶಕರ ರಾಜೀವ್ ಶೆಟ್ಟಿ, ಹೆಬ್ರಿ ಪಶುಪಾಲನೆ ಇಲಾಖೆ ಡಾ.ಪರಶುರಾಮ್, ಹಾಲು ಉತ್ಪಾದಕರ ಸಹಕಾರ ಸಂಘ ನಿರ್ದೇಶಕರು, ಪಶುಸಖಿಗಳು, ರೈತರಿದ್ದರು.
ಎಚ್.ಎಫ್ ಮಿಶ್ರತಳಿ ಹಸುಗಳ ವಿಭಾಗದಲ್ಲಿ ಕೃಷ್ಣ ಪೂಜಾರಿ ಪ್ರಥಮ, ಸವಿತಾ ದ್ವಿತೀಯ, ಲಲಿತಾ ತೃತೀಯ, ಜರ್ಸಿ ಮಿಶ್ರ ತಳಿ ಹಸುಗಳ ವಿಭಾಗ ಆನಂದ ಶೆಟ್ಟಿ ಪ್ರಥಮ, ಗೋಪಾಲ ಶೆಟ್ಟಿ ದ್ವಿತೀಯ, ಭುಜಂಗ ಶೆಟ್ಟಿ ತೃತೀಯ, ಕಡಸು ವಿಭಾಗದಲ್ಲಿ ನಿತ್ಯಾನಂದ ಭಟ್ ಪ್ರಥಮ, ಪ್ರಸನ್ನ ಶೆಟ್ಟಿ ದ್ವಿತೀಯ, ರಾಜೀವ ಶೆಟ್ಟಿ ತೃತೀಯ, ಕರುಗಳ ವಿಭಾಗದಲ್ಲಿ ಶ್ರೀಧರ ಪ್ರಥಮ, ಬೇಬಿ ದ್ವಿತೀಯ, ಪ್ರೇಮಾ ತೃತೀಯ ಸ್ಥಾನ ಪಡೆದರು. ಭಾಗವಹಿಸಿದ ಎಲ್ಲ ಜಾನುವಾರುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.