ಬೆಂಗಳೂರು ಅಂತಾರಾಷ್ಟ್ರೀಯ ಗ್ರಾಂಡ್​ ಮಾಸ್ಟರ್ಸ್​ ಚೆಸ್​ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮಿತ್ರಭಾ; ರೋಚಕ ಫೈನಲ್​ ಹಣಾಹಣಿ

chess web
Published on

ಬೆಂಗಳೂರು: ಮಿತ್ರಭಾ ಗುಹಾ ಚೊಚ್ಚಲ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಗ್ರಾಂಡ್​ ಮಾಸ್ಟರ್ಸ್​ ಓಪನ್​ ಚೆಸ್​ ಟೂರ್ನಿಯಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದರು.

ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅಂತಿಮ 10ನೇ ಸುತ್ತಿನ ರೋಚಕ ಹಣಾಹಣಿಯಲ್ಲಿ ಮಿತ್ರಭಾ ಗುಹಾ, ಶ್ಯಾಮ್​ಸುಂದರ್​ ವಿರುದ್ಧ ಗೆಲುವು ದಾಖಲಿಸಿದರೆ, ಮತ್ತೊಂದೆಡೆ ಎಸ್​ಪಿ ಸೇತುರಾಮನ್​ ಕೂಡ ದೀಪ್ತಾಯನ್​ ಘೋಷ್​ ಎದುರು ಗೆದ್ದರು. ಇದರೊಂದಿಗೆ ಮಿತ್ರಭಾ-ಸೇತುರಾಮನ್​ ತಲಾ 8 ಅಂಕಗಳ ಸಮಬಲ ಸಾಧಿಸಿದರು. ಇದರಿಂದ ವಿಜೇತರ ರ್ನಿಣಯಕ್ಕಾಗಿ ನಡೆದ ಟೈ&ಬ್ರೇಕ್​ ಕಾದಾಟದಲ್ಲಿ ಮಿತ್ರಭಾ ಗುಹಾ ಹೆಚ್ಚು ಅಂಕ ಸಂಪಾದಿಸಿದ ಆಧಾರದಲ್ಲಿ ಪ್ರಶಸ್ತಿ ಒಲಿಸಿಕೊಂಡರೆ, ಸೇತುರಾಮನ್​ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಶಾರ್ಟ್​ ನಿಗೆಲ್​ ಡಿ. 3ನೇ ಸ್ಥಾನ ಪಡೆದರು.

ಬೆಂಗಳೂರು ನಗರ ಜಿಲ್ಲಾ ಚೆಸ್​ ಸಂಸ್ಥೆ (ಬಿಯುಡಿಸಿಎ) ಆಯೋಜಿಸಿದ್ದ ಟೂರ್ನಿಯಲ್ಲಿ 20 ದೇಶಗಳ 2 ಸಾವಿರಕ್ಕೂ ಅಧಿಕ ಆಟಗಾರರ ಭಾಗವಹಿಸಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಬಿಯುಡಿಸಿಎ ಅಧ್ಯೆ ಸೌಮ್ಯ ಬಿಯು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net