ಭಾರಿ ಅನಾಹುತದಿಂದ ಪಾರಾದ ಸಿಎಂ, ಸಚಿವ ಸುಧಾಕರ್: ಸ್ವಲ್ಪ ಎಡವಟ್ಟಾಗಿದ್ದರೂ ಹೆಲಿಕಾಪ್ಟರ್ ಕಟ್ಟಡಕ್ಕೆ ಡಿಕ್ಕಿ?!

Helicopter F
Published on

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಡಾ.ಕೆ.ಸುಧಾಕರ್ ಅವರಿದ್ದ ಹೆಲಿಕಾಪ್ಟರ್ ಟೇಕಾಫ್​ ವೇಳೆ ಎಡವಟ್ಟಾಗಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿಹೋಗಿದೆ.

ಚಿಕ್ಕಬಳ್ಳಾಪುರದ ಎಸ್​​ಜೆಸಿಐಟಿ ಕಾಲೇಜು ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ. ಸಿಎಂ, ಸಚಿವರಿದ್ದ ಹೆಲಿಕಾಪ್ಟರ್ ಟೇಕಾಫ್ ಆಗುವ ವೇಳೆ ದಟ್ಟವಾದ ಧೂಳು ಆವರಿಸಿಕೊಂಡು, ಹೆಲಿಕಾಪ್ಟರ್ ಗಿರಗಿರ ತಿರುಗಲಾರಂಭಿಸಿತ್ತು.

ಟೇಕಾಫ್ ಆಗಿ ಮೇಲೆ ಹೋಗಲಾಗದೆ ಮತ್ತೆ ಕೆಳಗೆ ಬಂದ ಹೆಲಿಕಾಪ್ಟರ್ ಅದೃಷ್ಟವಶಾತ್ ಭಾರಿ ಅನಾಹುತದಿಂದ ಪಾರಾಗಿದೆ. ಸ್ವಲ್ಪ ಹೆಚ್ಚೂಕಮ್ಮಿಯಾಗಿದ್ದರೂ ಹೆಲಿಕಾಪ್ಟರ್ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net