ಕೆಲಸಕ್ಕೆ ತೆರಳಿದ್ದಾತ ಕಾಣೆ

kota
Published on

ಕೋಟ: ಬ್ರಹ್ಮಾವರ ತಾಲೂಕಿನ ಕಾವಡಿ ಗ್ರಾಮದ ಪ್ರಕಾಶ (39) ನಾಪತ್ತೆಯಾಗಿದ್ದಾರೆ. 5 ವರ್ಷದಿಂದ ಮಂಗಳೂರಿನಲ್ಲಿ ರೊಟ್ಟಿ ಪ್ಯಾಕೇಜಿಂಗ್ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿದ್ದ ಇವರು 5ರಿಂದ 6 ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದ. ನಂತರ ಫೋನ್ ಮಾಡಿದಾಗ ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಇರುವುದಾಗಿ ತಿಳಿಸುತ್ತಿದ್ದ. 2024ರ ಜೂನ್‌ನಲ್ಲಿ ಮನೆಗೆ ಬಂದು ಹೋಗಿದ್ದು, ಕಳೆದ 7ತಿಂಗಳಿನಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಫೋನ್ ಸ್ವಿಚ್‌ಆಫ್ ಆಗಿದೆ. ಪ್ರಕಾಶ ಶೆಟ್ಟಿ ಇದೇ ರೀತಿ ಮನೆ ಬಿಟ್ಟು ಹೋಗುವ ಅಭ್ಯಾಸವಿದ್ದು ಮನೆಗೆ ಬರಬಹುದು ಅಥವಾ ಪೋನ್ ಮಾಡಬಹುದು ಎಂಬ ವಿಶ್ವಾಸದಿಂದ ದೂರು ನೀಡಿರಲಿಲ್ಲ. ಇದುವರೆಗೂ ಬಾರದೆ ಇದುದ್ದನ್ನು ಗಮನಿಸಿ, ಮನೆಮಂದಿ ಕೋಟ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುಳಿವು ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ಅಥವಾ ವೃತ್ತ ನಿರೀಕ್ಷಕರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net