ಅಗ್ನಿಪಥದ ಬಗ್ಗೆ ವಿಪಕ್ಷಗಳಿಂದ ತಪ್ಪು ಮಾಹಿತಿ: ಬೇಕೆಂದೇ 500 ರೂ.ಗೆ ಜನರನ್ನು ಕರೆತರಲಾಗ್ತಿದೆ: ವಿ.ಕೆ.ಸಿಂಗ್​​

VK singh
Published on

ನವದೆಹಲಿ: ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆ ಕೈಗೊಂಡಿರುವವರನ್ನು ಬೇಕೆಂದೇ ಕರೆತರಲಾಗುತ್ತಿದೆ ಎಂದು ವಿಪಕ್ಷಗಳ ವಿರುದ್ಧ ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್​ ಗಂಭೀರ ಆರೋಪ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳಿಗೆ ವಿರೋಧ ಪಕ್ಷಗಳ ಪ್ರಚೋದನೆಯೇ ಕಾರಣವಾಗಿದ್ದು, ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೇಕೆಂತಲೇ ಸಾರ್ವಜನಿಕ ಆಸ್ತಿ ನಷ್ಟ ಮಾಡಲು 500 ರೂ.ನೀಡಿ ಜನರನ್ನು ಕರೆತರುತ್ತಿದ್ದಾರೆ. ಇದು ದೇಶಕ್ಕೆ ಮಾರಕವಾಗಿದ್ದು, ದೇಶದ ಬಗ್ಗೆ ವಿಪಕ್ಷಗಳು ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಉದ್ಯೋಗ ಸೃಷ್ಟಿಸಲು ಸೇನೆಯನ್ನು ಸರ್ಕಾರ ಬಳಸಿಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ಈ ಯೋಜನೆಯ ಮೂಲಕ ಭೂ ಸೇನೆ, ನೌಕಾಪಡೆ ಮತ್ತು ವಾಯುಸೇನೆಗೆ ಪ್ರವೇಶಿಸುವ ಅಗ್ನಿವೀರ್​ಗಳಿಗೆ ಇತರ ಸೈನಿಕರು ಹಾಗೂ ಅಧಿಕಾರಿಗಳಿಗೆ ನೀಡುವಂತೆಯೇ ಸಮಾನವಾತಿ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net