ಬಸ್‌ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ : 60 ವರ್ಷದ ವೃದ್ಧ ವಶ

misbehave
Published on

ಮೂಡುಬಿದಿರೆ: ಇಲ್ಲಿನ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ಮುದುಕನೊರ್ವ ಮುಟ್ಟಿ ಅಸಭ್ಯ ರೀತಿ ವರ್ತಿಸಿದ್ದು, ಆರೋಪಿಯನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸ್‌ನಲ್ಲಿ ಆರೋಪಿ ಕುಳಿತುಕೊಂಡಿದ್ದು, ಆತನ ಬದಿಯಲ್ಲಿ ಯುವತಿಯೋರ್ವಳು ನಿಂತಿದ್ದಳು. ಆರೋಪಿ ತನ್ನ ಕೈಗಳಿಂದ ಆಕೆಯ ತೊಡೆ, ಕಾಲುಗಳನ್ನು ಮುಟ್ಟಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳುವಾಯಿ ಗ್ರಾಮದ ಕರಿಯನಂಗಡಿ ನಿವಾಸಿ 60 ವರ್ಷದ ರೆಹ್ಮಾನ್ ಆರೋಪಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net