ಧರ್ಮಸ್ಥಳದ ಅವಹೇಳನ ಸರಿಯಲ್ಲ : ದುಗ್ಗಣ್ಣ ಸಾವಂತ ಅರಸರು ಹೇಳಿಕೆ

03
Published on

ಮೂಲ್ಕಿ: ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ದಿನಗಳಲ್ಲಿ ಇಲ್ಲಸಲ್ಲದ ಆರೋಪಗಳು ಕೇಳಿ ಬರುತ್ತಿವೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಕುರಿತಾಗಿ ಅವಹೇಳನಕಾರಿ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಮಾತ್ರವಲ್ಲ ತುಳು ನಾಡಿನ ಧಾರ್ಮಿಕ ಶ್ರದ್ಧಾಕೇಂದ್ರಗಳು ಹಿಂದು ಹಾಗೂ ಜೈನ ಧರ್ಮದ ಸಹಬಾಳ್ವೆಗೆ ಸಾಕ್ಷಿಯಾಗಿವೆ. ಹಿಂದು ಧರ್ಮದ ಜತೆಗೆ ಜೈನ ಧರ್ಮೀಯರು ಸಮನಾಗಿ ಹೆಜ್ಜೆ ಹಾಕುತ್ತಿರುವ ಹೊತ್ತಿನಲ್ಲಿ ಧಾರ್ಮಿಕ ಸೌಹಾರ್ದ ಕದಡುವ ಪ್ರಯತ್ನವಾಗುತ್ತಿದೆ. ಈ ನಾಡಿನ ನ್ಯಾಯಾಂಗ ವ್ಯವಸ್ಥೆ ಮತ್ತು ತನಿಖಾ ಸಂಸ್ಥೆಗಳ ಮೇಲೆ ನಮಗೆ ಅಚಲ ನಂಬಿಕೆ ಮತ್ತು ವಿಶ್ವಾಸ ಇದೆ. ಸದ್ಯ ನಡೆಯುತ್ತಿರುವ ಎಸ್.ಐ.ಟಿ. ತನಿಖೆ ಧರ್ಮಸ್ಥಳವನ್ನು ಆರೋಪಮುಕ್ತ ಮಾಡುವುದರ ಜತೆಗೆ ಮಿಥ್ಯಾರೋಪಗಳ ಷಡ್ಯಂತ್ರ ಬಯಲು ಮಾಡಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net