

ಬೆಳ್ತಂಗಡಿ: ಕನ್ಯಾಡಿ ಸೇವಾಭಾರತಿ ಖಜಾಂಚಿ ಮತ್ತು ಸೇವಾಧಾಮ ಸಂಸ್ಥಾಪಕ ಕೆ.ವಿನಾಯಕ ರಾವ್ ಅವರನ್ನು ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಯೋಜಿಸಿದ ಇಂಡಿಯನ್ ಆರ್ಥೋಪೆಡಿಕ್ ಅಸೋಸಿಯೇಶನ್ ಮೂಳೆ ಮತ್ತು ಕೀಲು ದುರ್ಬಲತೆ-2025 ಕಾರ್ಯಕ್ರಮದಲ್ಲಿ ಐಒಎ ಸುವರ್ಣ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಿನಾಯಕ ರಾವ್ ಅವರು ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಸೇವಾಧಾಮ ಪುನಃಶ್ಚೇತನ ಕೇಂದ್ರದ ಮೂಲಕ ಪುನಃಶ್ಚೇತನ ನೀಡುತ್ತಾ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಮಹಿಳಾ ಸಬಲೀಕರಣ ಸೇರಿದಂತೆ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಅಸಿಸ್ಟೆಂಟ್ ಪ್ರೊಫೆಸರ್ ಡಾ.ಚೇತನ್ ಶೆಟ್ಟಿ, ಪ್ರೊಫೆಸರ್ ಮತ್ತು ಐಒಎ ಡಿಪಾರ್ಟ್‌ಮೆಂಟ್ ಆಫ್ ಆರ್ಥೋಪೆಡಿಕ್‌ನ ಡಾ.ಆತ್ಮಾನಂದ ಹೆಗ್ಡೆ, ಅಸೋಸಿಯೇಟ್ ಪ್ರೊಫೆಸರ್ ಮತ್ತು ಸ್ಪೈನ್ ಸರ್ಜನ್ ಡಾ.ಈಶ್ವರಕೀರ್ತಿ ಸಿ., ಸ್ಪೈನ್ ಸರ್ಜನ್ ಡಾ.ವೈಶಾಕ್ ಭಟ್, ಅಸಿಸ್ಟೆಂಟ್ ಪ್ರೊಫೆಸರ್ ಡಾ.ಕೀರ್ತನ್ ರಂಗ ನಾಯಕ್ ಉಪಸ್ಥಿತರಿದ್ದರು.