

ಕಾಸರಗೋಡು: ಹೊಸದುರ್ಗ ಪುದಿಯಕೋಟದಲ್ಲಿ ತಾಯಿ ಜತೆ ತೆರಳುತ್ತಿದ್ದ ಹತ್ತರ ಹರೆಯದ ಬಾಲಕಿ ಎದುರು ಅಶ್ಲೀಲವಾಗಿ ವರ್ತಿಸಿದ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನೀರ್ಚಾಲ್ ಗೋಳಿಯಡ್ಕ ನಿವಾಸಿ ಮಹಮ್ಮದ್ ಜಿ. ಅಲಿಯಾಸ್ ಶಾಫಿ(28)ಎಂಬಾತನನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.