

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಹಿರಿಯರ ಬದುಕು ಪರಿಸರದ ಆಹಾರ ಪದ್ಧತಿಗಳಿಂದ ನಡೆದಿದ್ದು, ಇಂತಹ ಕಷ್ಟಕರ ಜೀವನದಿಂದಾಗಿ ಅನೇಕ ಸಂಪ್ರದಾಯಗಳು ಬೆಳೆದಿವೆ. ಇದನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ಅದಕ್ಕೆ ಆಟಿ ಕೂಟ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕೆ.ಶೈಲೇಶ್ ಕುಮಾರ್ ಹೇಳಿದರು.
ತುಳುನಾಡ್ ಒಕ್ಕೂಟ ಬೆಳ್ತಂಗಡಿ ಇದರ ವತಿಯಿಂದ ನಡೆದ ನಾಲ್ಕನೇ ವರ್ಷದ ಚೆನ್ನೆಮಣೆ ಮತ್ತು ಸಂದಿ ಪಾರ್ದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಸಂಧ್ಯಾ ಕಾಲೇಜಿನ ತುಳು ಉಪನ್ಯಾಸಕಿ ಸಂಧ್ಯಾ ಆಳ್ವ ಮಾತನಾಡಿದರು. ತುಳುನಾಡ್ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಶೈಲೇಶ್ ಅರ್.ಜೆ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಅಯ್ಕೆಯಾದ ಕೆ.ಶೈಲೇಶ್ ಕುಮಾರ್, ಖ್ಯಾತ ನಾಟಿವೈದ್ಯ ಶ್ರೀನಿವಾಸ್ ಪೂಜಾರಿ ಅವರನ್ನು ಗೌರವಿಸಲಾಯಿತು.
ವಿಜಯವಾಣಿ ವರದಿಗಾರ ಮನೋಹರ್ ಬಳಂಜ, ಉಪನ್ಯಾಸಕ ಮೋಹನ್ ಗೌಡ, ತೆರಿಗೆ ಸಲಹೆಗಾರ ಟಿ.ಜೆ ಮೋರಸ್ ಉಜಿರೆ, ತುಳುನಾಡ್ ಒಕ್ಕೂಟ ಕಾರ್ಯದರ್ಶಿ ವಿನ್ಸೆಂಟ್ ಲೋಬೋ ಉಪಸ್ಥಿತರಿದ್ದರು. ತುಳುನಾಡ್ ಒಕ್ಕೂಟದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ರಾಜೀವ್ ಬಿ.ಎಚ್ ಪ್ರಸ್ತಾವನೆಗೈದರು. ಒಕ್ಕೂಟದ ಕಾನೂನು ಸಲಹೆಗಾರ ಸುರೇಶ್ ಸ್ವಾಗತಿಸಿ, ಹರೀಶ್ ವಂದಿಸಿದರು. ಪ್ರಸನ್ನ ಕಾಲೇಜಿನ ಉಪನ್ಯಾಸಕಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.
ತುಳು ನಮ್ಮ ತಾಯಿ ಭಾಷೆ. ಇದಕ್ಕಿರುವ ಮಹತ್ವ ಯಾವ ಭಾಷೆಗೂ ಇಲ್ಲ. ಇದನ್ನು ಅರಿತುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಸಂದಿ ಪಾರ್ದನ, ಚೆನ್ನೆಮಣೆ ಆಟದ ಇತಿಹಾಸ ತಿಳಿದರೆ ಯಾರು ಕೂಡ ತುಳು ಭಾಷೆಯನ್ನು ಅವಮಾನಿಸಲು ಸಾಧ್ಯವಿಲ್ಲ. ಸಂಧ್ಯಾ ಆಳ್ವ , ಸಂಧ್ಯಾ ಕಾಲೇಜಿನ ಉಪನ್ಯಾಸಕಿ