ಯಂತ್ರದ ಮೂಲಕ ಭತ್ತ ನಾಟಿ ಕಾರ್ಯಾಗಾರ

paddy
ಮಯ್ಯರಬೈಲು ರಾಜಗೋಪಾಲ್ ಹೊಳ್ಳರ ಜಮೀನಿನಲ್ಲಿ ಯಂತ್ರದ ಮೂಲಕ ಭತ್ತದ ಕೃಷಿ ನಾಟಿ ಮಾಹಿತಿ ಕಾರ್ಯಕ್ರಮ ನಡೆಯಿತು
Published on

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘ ಒಕ್ಕೂಟಗಳ ಸಹಯೋಗದೊಂದಿಗೆ ಬಿ.ಸಿ.ರೋಡ್ ಮಯ್ಯರಬೈಲು ರಾಜಗೋಪಾಲ್ ಹೊಳ್ಳರ ಜಮೀನಿನಲ್ಲಿ ಯಂತ್ರದ ಮೂಲಕ ಭತ್ತದ ಕೃಷಿ ನಾಟಿ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.

ಸಿಎಚ್‌ಎಸ್‌ಸಿ ಕೇಂದ್ರದ ಯೋಜನಾಧಿಕಾರಿ ಮೋಹನ್ ಕಾರ್ಯಕ್ರಮ ಉದ್ಘಾಟಿಸಿ, ಯಂತ್ರಶ್ರೀ ಮೂಲಕ ಕೃಷಿ ಮಾಡುವುದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಸಿಎಚ್‌ಎಸ್‌ಸಿ ಯಂತ್ರಶ್ರೀ ಕಾರ್ಯಕ್ರಮ ಮೇಲ್ವಿಚಾರಕ ಉಮೇಶ್ ಭತ್ತದ ಸಸಿ ಮಾಡುವ ವಿಧಾನ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ರಾಜಗೋಪಾಲ್ ಹೊಳ್ಳ, ಕೇಂದ್ರ ಒಕ್ಕೂಟ ಮಾಜಿ ಅಧ್ಯಕ್ಷ ರಾಜೇಶ್ ಪಂಜಿಕಲ್ಲು, ಒಕ್ಕೂಟ ಅಧ್ಯಕ್ಷೆ ಹೇಮಾವತಿ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ವನಜಾಕ್ಷಿ ಸ್ವಾಗತಿಸಿ, ಅಮ್ಟಾಡಿ ಸೇವಾ ಪ್ರತಿನಿಧಿ ವನಿತಾ ವಂದಿಸಿ, ಯೋಜನೆ ಬಂಟ್ವಾಳ ತಾಲೂಕು ಕೃಷಿ ಮೇಲ್ವಿಚಾರಕ ಜಯರಾಮ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net