ನೀವು ಧೋನಿ ಇದ್ದಂತೆ... Richa Ghosh ಸ್ಫೋಟಕ ಆಟಕ್ಕೆ ಹರಿದು ಬರುತ್ತಿದೆ ಮೆಚ್ಚುಗೆಯ ಮಹಾಪೂರ

Richa Ghosh
Published on

ವಡೋದರಾ: ಇಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್​ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಆರು ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಇದಲ್ಲದೆ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆಯನ್ನು ಆರ್​ಸಿಬಿ ತನ್ನದಾಗಿಸಿಕೊಂಡಿದೆ.

ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡ ಆರ್​ಸಿಬಿ (RCB) ನಾಯಕಿ ಸ್ಮೃತಿ ಮಂದನಾ ಆತಿಥೇಯರನ್ನು ಬ್ಯಾಟಿಂಗ್​ ಆಹ್ವಾನಿಸಿದರು. ಆರ್​ಸಿಬಿ ಸವಾಲನ್ನು ಸ್ವೀಕರಿಸಿದ ಗುಜರಾತ್ ಜೈಂಟ್ಸ್ ತಂಡವು ಆಶ್ಲೀ ಗಾರ್ಡ್ನರ್ (79 ರನ್, 37 ಎಸೆತ, 3 ಬೌಂಡರಿ, 8 ಸಿಕ್ಸರ್​), ನಾಯಕಿ ಬೆತ್ ಮೂನಿ (56 ರನ್, 42 ಎಸೆತ, 8 ಬೌಂಡರಿ) ಭರ್ಜರಿ ಬ್ಯಾಟಿಂಗ್ ಫಲವಾಗಿ 5 ವಿಕೆಟ್ ನಷ್ಟಕ್ಕೆ 201ರನ್​ ಗಳಿಸಿತು.

ಸವಾಲಿನ ಗುರಿ ಬೆನ್ನತ್ತಿದ್ದ ಆರ್​​ಸಿಬಿ (RCB) ತಂಡವು ಆರಂಭಿಕ ಆಘಾತದ ಹೊರತಾಗಿಯೂ ಎಲ್ಲಿಸ್ ಪೆರ್ರಿ (57 ರನ್, 34 ಎಸೆತ, 4 ಬೌಂಡರಿ, 2 ಸಿಕ್ಸರ್), ರಿಚಾ ಘೋಷ್​ (64 ರನ್, 27 ಎಸೆತ, 7 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಫಲವಾಗಿ 18.3 ಓವರ್​ಗಳಲ್ಲಿ  202 ರನ್ ಬಾರಿಸಿ 6 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು.

ಇನ್ನೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಿಚಾ ಘೋಷ್ (Richa Ghosh) ಅವರ ಆಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅನೇಕರು ಇವರನ್ನು ಲೇಡಿ ಎಂ.ಎಸ್. ಧೋನಿ ಎಂದು ಕರೆದಿದ್ದು, ಇವರ ಬ್ಯಾಟಿಂಗ್ ವೈಖರಿ ಮತ್ತು ಫಿನಿಶರ್​ ಪಾತ್ರ ನಿರ್ವವಹಿಸಿದ ರೀತಿಯನ್ನು ಕೊಂಡಾಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಫೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net