More

    ರಜನಿ ಫ್ಯಾನ್ಸ್​ಗೆ ಗುಡ್​ ನ್ಯೂಸ್​; ಜೈಲರ್​-2 ಕನ್ಫರ್ಮ್ ಮಾಡಿದ​​ ಖ್ಯಾತ ನಟಿ

    ಚೆನ್ನೈ: ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ್ದ ಸೂಪರ್​ಸ್ಟಾರ್​ ರಜನಿಕಾಂತ್​ ಅಭಿನಯದ ಜೈಲರ್​ ಚಿತ್ರವು ಚಿತ್ರಮಂದಿರ ಮಾತ್ರವಲ್ಲದೇ ಒಟಿಟಿಯಲ್ಲೂ ಸಖತ್​ ಸೌಂಡ್​ ಮಾಡಿತ್ತು. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಜೈಲರ್​-2 ಚಿತ್ರದ ಬಗ್ಗೆ ಚರ್ಚೆ ಆಗುತ್ತಿದ್ದು, ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಈಗಾಗಲೇ ಸ್ಕ್ರಿಪ್ಟ್​ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಜೈಲರ್​ ಚಿತ್ರದಲ್ಲಿ ರಜನಿಕಾಂತ್​ ಸೊಸೆ ಪಾತ್ರ ನಿರ್ವಹಿಸಿದ್ದ ಮಿರ್ನಾ ಮೆನನ್ ಈ ಬಗ್ಗೆ ತಿಳಿಸಿದ್ದು, ಕಾಲಿವುಡ್​ ಅಂಗಳದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ. ಬರ್ತ್​ಮಾರ್ಕ್ ಚಿತ್ರದ ಪ್ರಮೋಷನ್​ನಲ್ಲಿ ಮಿರ್ನಾ ಈ ಬಗ್ಗೆ ಮಾತನಾಡಿದ್ದು, ಶೀಘ್ರವೇ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಪ್ರಕಟಿಸಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

    ರಜನಿ ಫ್ಯಾನ್ಸ್​ಗೆ ಗುಡ್​ ನ್ಯೂಸ್​; ಜೈಲರ್​-2 ಕನ್ಫರ್ಮ್ ಮಾಡಿದ​​ ಖ್ಯಾತ ನಟಿ

    ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಪ್ರಭಾವಿ ಬಿಜೆಪಿ ನಾಯಕ ಅರೆಸ್ಟ್​

    ಜೈಲರ್​ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಡಾ. ಶಿವರಾಜ್​ಕುಮಾರ್​ ಅವರ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಶಿವರಾಜ್​ಕುಮಾರ್​ ಅವರ ಪಾತ್ರವನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವಂತೆ ನಿರ್ದೇಶಕ ನೆಲ್ಸನ್​ಗೆ ಸಿನಿ ಪ್ರಿಯರು ಆಗ್ರಹಿಸಿದ್ದರು. ಇದೀಗ ಸದ್ದಿಲ್ಲದೇ ಜೈಲರ್​-2 ಚಿತ್ರದ ಕೆಲಸಗಳು ಆರಂಭವಾಗಿದ್ದು, ಕಲಾನಿಧಿ ಮಾರನ್​ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಲಿದ್ದಾರೆ ಎಂದು ವರದಿಯಾಗಿದೆ.

    ಕಳೆದ ವರ್ಷ ಆಗಸ್ಟ್ 10ರಂದು ‘ಜೈಲರ್’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಬಾಕ್ಸ್​ಆಫೀಸ್​ನಲ್ಲಿ 700 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಮಾಡಿದ್ದ ಈ ಚಿತ್ರದ ಕಲೆಕ್ಷನ್​ ಕಂಡು ನಿರ್ಮಾಪಕರು ನಾಯಕ ರಜನಿಕಾಂತ್, ನಿರ್ದೇಶಕ ನೆಲ್ಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರುಗಳಿಗೆ ಐಶಾರಾಮಿ ಕಾರುಗಳನ್ನು ಹಾಗೂ ನಗದು ಹಣವನ್ನು ಉಡುಗೊರೆಯಾಗಿ ನೀಡಿ ಸತ್ಕರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts