More

    ನಿರ್ಮಾಪಕ ಉಮಾಪತಿಗೆ ಬೆದರಿಕೆ; ದಿಢೀರ್​ ಕ್ಷಮೆ ಕೇಳಿ ದೂರು ಹಿಂಪಡೆದ ಕನ್ನಡ ಶಫಿ

    ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ ಕಾಟೇರ ಚಿತ್ರವು ಯಶಸ್ವಿಯಾಗಿ 50ನೇ ದಿನ ಪೂರೈಸಿದ ಬೆನ್ನಲ್ಲೇ ಚಿತ್ರತಂಡದ ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು. ಇನ್ನು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ನಟ ದರ್ಶನ್​ ತಮ್ಮ ಮಾಜಿ ಗೆಳೆಯ ಉಮಾಪತಿಗೆ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ದರು.

    ಇನ್ನು ದರ್ಶನ್​ ನಿರ್ಮಾಪಕ ಉಮಾಪತಿ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿತ್ತು ಮತ್ತು ವ್ಯಾಪಕ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿಗೆ ಸಲ್ಲಿಸಲಾಗಿದ್ದ ದೂರನ್ನು ಹಿಂಪಡೆಯಲಾಗಿದ್ದು, ಕ್ಷಮೆಯಾಚಿಸಲಾಗಿದೆ.

    kannada Shafi

    ಇದನ್ನೂ ಓದಿ: ಸದನದಲ್ಲಿ ವಿಪಕ್ಷಗಳ ಪ್ರತಿಭಟನೆ; ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

    ಈ ಕುರಿತು ವಿಡಿಯೋ ಹೇಳಿಕೆ ಒಂದನ್ನು ಬಿಡುಗಡೆ ಮಾಡಿರುವ ಕನ್ನಡ ಪ್ರಜಾವರ ವೇದಿಕೆ ಮುಖ್ಯಸ್ಥ ಕನ್ನಡ ಶಫಿ, ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಶಫಿ. ಕರ್ನಾಟಕ ಪ್ರಜಾಪರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ. ಇಂದು ನಾನು ನಿಮ್ಮ ಮುಂದೆ ಬಂದಿರುವ ಉದ್ದೇಶ ಏನೆಂದರೆ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ವೇದಿಕೆಯಲ್ಲಿ ನಟ ದರ್ಶನ್ ಮಾತನಾಡಿದ್ದು ಮುಜುಗರ ತಂದಿದ್ದ ವಿಚಾರ. ಹಾಗಾಗಿ ನಿನ್ನೆ ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದೆವು.

    ನಾವು ಸಂಘಟನೆಯವರು ಸ್ವಲ್ಪ ಆತುರ ಮಾಡಿದ್ದೇವೆ ಎನಿಸುತ್ತದೆ. ಚಿತ್ರರಂಗದಲ್ಲಿ ಬೆಳೆದು ನಿಂತಿರುವ ಹಿರಿಯ ನಟನಿಗೆ ಇದರಿಂದ ನೋವಾಗಿದ್ದರೆ ನಮ್ಮ ಸಂಘಟನೆಗಳ ಪರವಾಗಿ ಕನ್ನಡದ ಮನಸ್ಸುಗಳಿಗೆ ಕ್ಷಮೆ ಯಾಚಿಸುತ್ತೇನೆ ಎಂದು ಕನ್ನಡ ಪ್ರಜಾಪರ ವೇದಿಕೆ ಕನ್ನಡ ಶಫಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts