ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು

Meera bayi chanu
Published on

ಅಹಮದಾಬಾದ್​​: 36ನೇ ರಾಷ್ಟ್ರೀಯ ಕ್ರೀಡಾಕೂಡದ ಮಹಿಳೆಯರ ವಿಭಾಗದ ವೈಟ್​​ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. 49 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಾನು, 191 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮೀರಾಬಾಯಿ ಚಾನು ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಣಿಪುರವನ್ನು ಸ್ಪರ್ಧಿಸಲು ಹೆಮ್ಮೆಯಾಗುತ್ತದೆ. ಕ್ರೀಡಾಕೂಟದ ಉದ್ಘಾಟನೆಯ ದಿನ ರಾಜ್ಯ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿತ್ತು. ಈ ಅವಕಾಶ ಮರೆಯಲಾಗದ ಕ್ಷಣ. ಈ ವೇಳೆ ಪದಕ ಗೆಲ್ಲಬೇಕೆಂದು ದೃಢ ಸಂಕಲ್ಪ ಮಾಡಿಕೊಂಡೆ ಎಂದು ಮೀರಾಬಾಯಿ ಚಾನು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಎನ್‌ಐಎಸ್ ಪಟಿಯಾಲಾದಲ್ಲಿ ವ್ಯಾಯಾಮ ಮಾಡುವಾಗ ನನ್ನ ಎಡ ಮಣಿಕಟ್ಟಿಗೆ ಹಾನಿಯಾಗಿತ್ತು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶ ತಪ್ಪುತ್ತಿತ್ತು. ಈ ವೇಳೆ ಎಚ್ಚರಿಕೆ ವಹಿಸಿಕೊಂಡೆ. ಯಾವುದೇ ಅಪಾಯಕ್ಕೆ ಸಿಲುಕಿಕೊಳ್ಳದಂತೆ ಜಾಗರೂಕತೆ ಮಾಡಿಕೊಂಡೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net