

ಶಿರಸಿ: ರಾಜ್ಯದಲ್ಲಿ ದಲಿತ ಸಿ.ಎಂ ಮಾಡಲು ಇನ್ನೂ ಕಾಲ ಕೂಡಿ ಬಂದಿಲ್ಲ ಕಾಲ ಬಂದಾಗ ಹೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಮಾಡುವ ಬಗ್ಗೆ ಪಕ್ಷಕ್ಕೆ ನಮ್ಮ ಅಭಿಪ್ರಾಯ ಹೇಳಬಹುದು. ಆದರೆ, ನಿರ್ಧಾರ ಹೈಕಮಾಂಡ್ ಮಾಡಬೇಕು ನನಗೆ ಪಕ್ಷದ ಮೇಲೆ ಯಾವುದೇ ಅಸಮಧಾನ ಇಲ್ಲ ಎಂದರು.
ಬಿ.ಕೆ. ಹರಿಪ್ರಸಾದ್ ರವರನ್ನು ಪಕ್ಷ ಕಡಗಣನೆ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಕೆ ಹರಿಪ್ರಸಾದ್ ಅವರನ್ನು ಪಕ್ಷ ಕಡಗಣನೆ ಮಾಡುವ ಪ್ರಶ್ನೆಯೇ ಇಲ್ಲ. ಅವರನ್ನು ಯಾರೂ ಕೆಳಗಿಳಿಸುವ ಪ್ರಶ್ನೆ ಇಲ್ಲ. ನಾವು ಅವರ ಜೊತೆ ಚರ್ಚೆ ಮಾಡಿದ್ದೇವೆ.ಬಹಳಷ್ಟು ಹಿರಿಯ ನಾಯಕರಿಗೆ ಸ್ಥಾನ ನೀಡಿಲ್ಲ. ಅವಕಾಶ ಬಂದಾಗ ಅವರಿಗೆ ಸ್ಥಾನಮಾನ ನೀಡುತ್ತಾರೆ. ಇನ್ನು ನಿಗಮ ಮಂಡಳಿಯಲ್ಲಿ 25 ಜನ ಶಾಸಕರಿಗೆ ಸ್ಥಾನ ನೀಡುತಿದ್ದಾರೆ.ಚುನಾವಣೆ ಮುಗಿದ ನಂತರ ಇನ್ನಷ್ಟು ಜನರಿಗೆ ನೀಡುತ್ತಾರೆ. ಎಲ್ಲರಿಗೂ ಸಮಾಧಾನ ಮಾಡಲು ಅವಕಾಶ ಇದೆ,ಅಸಮದಾನ ಆಗುವ ಪ್ರಶ್ನೆ ಇಲ್ಲ ಎಂದರು.
ಗುತ್ತಿಗೆದಾರರಿಗೆ ಪ್ರಾಮುಖ್ಯತೆ ಮೇಲೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತೇವೆ.ಹಿಂದಿನ ಸರ್ಕಾರ ಅನುದಾನಕ್ಕಿಂತ ಹೆಚ್ಚಿಗೆ ಕಾಮಗಾರಿ ಮಂಜೂರು ಮಾಡಿದ್ದರಿಂದ ಸಮಸ್ಯೆಯಾಗಿದೆ.ಸಾವಿರದ ಐವತ್ತೈದು ಕೋಟಿ ಅನುದಾನ ಇರುವುದು ಹಿಂದಿನ ಸರ್ಕಾರ ಎರಡು ಪಟ್ಟು ಜಾಸ್ತಿ ನೀಡಿದ್ದಾರೆ.ಅದೇ ಬ್ಯಾಲೆನ್ಸ್ ಆಗಿದೆ ಅದನ್ನು ಬೇಗ ಕೊಡಲು ಪ್ರಯತ್ನ ಮಾಡುತ್ತೇವೆ ಎಂದರು. ಈಶ್ವರಪ್ಪನವರ ರಕ್ತ ಮಾತ್ರ ಅಲ್ಲ ಎಲ್ಲರ ರಕ್ತವೂ ಹಿಂದುಗಳದ್ದು ಎಂದು ಈಶ್ವರಪ್ಪನವರ ಹೇಳಿಕೆಗೆ ಟಾಂಗ್ ನೀಡಿದರು.