More

    ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಐದು ಸಾವಿರಕ್ಕೂ ಹೆಚ್ಚು ಅರಣ್ಯವಾಸಿಗಳಿಂದ ಬೃಹತ್‌ ಪ್ರತಿಭಟನೆ

    ಶಿರಸಿ: ಅರಣ್ಯ ಅತಿಕ್ರಮಣ ದಾರರಿಗೆ ಖಂಡಿತ ಹಕ್ಕು ಪತ್ರ ಸಿಗಲಿದೆ.ಯಾವೊಬ್ಬ ಅರಣ್ಯ ಅತಿಕ್ರಮಣ ದಾರನೂ ಹೆದರುವ ಅಗತ್ಯವಿಲ್ಲ
    ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.
    ನಗರದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಸ್ತೂರಿ ರಂಗನ್ ವರದಿ ವಿರೋಧ ಜಾಥ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ 33ವರ್ಷ ಗಳಿಂದ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಅರಣ್ಯ ಅತಿಕ್ರಮಣ ದಾರರ ಸಮಸ್ಯೆ ಗಳ ಕುರಿತು ಹೋರಾಟಗಳು ನಡೆಯುತ್ತಲೇ ಬಂದಿದೆ. ಅರಣ್ಯ ವಾಸಿಗಳಿಗೆ ಸಾಕಷ್ಟು ಸಮಸ್ಯೆಗಳಿಗೆ, ಇವೆಲ್ಲದಕ್ಕೂ ಖಂಡಿತ ಪರಿಹಾರ ಸಿಗಲಿದೆ. ಕಸ್ತೂರಿ ರಂಗನ್ ವರದಿಯನ್ನು ನಾವೆಲ್ಲರೂ ವಿರೋಧಿಸಬೇಕು ಎಂದರು

    .ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಐದು ಸಾವಿರಕ್ಕೂ ಹೆಚ್ಚು ಅರಣ್ಯವಾಸಿಗಳಿಂದ ಬೃಹತ್‌ ಪ್ರತಿಭಟನೆ

    ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಅರಣ್ಯ ಅತಿಕ್ರಮಣ ದಾರರ ಪರವಾಗಿ ನಮ್ಮ ಸರ್ಕಾರವಿದೆ. ಅತಿಕ್ರಮಣದಾರರ ಪರವಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ. ಅರಣ್ಯ ಇಲಾಖೆ ಮತ್ತು ಅರಣ್ಯ ಅತಿಕ್ರಮಣದಾರರ ನಡುವೆ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಅರಣ್ಯ ಸಚಿವರ ಜೊತೆ ಚರ್ಚೆ ನಡೆಸುತ್ತೇವೆ. ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತೀರಸ್ಕಾರ ಮಾಡೋಣ ಎಂದರು.

    ಇದನ್ನೂ ಓದಿ: ವಿದ್ಯುತ್ ಶಾಕ್- ಚಿರತೆ, ಕಾಡು ಬೆಕ್ಕು ಸಾವು

    ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ನಮ್ಮ ವೇದಿಕೆಯು 33ವರ್ಷದಿಂದ 5ಸಾವಿರಕ್ಕಿಂತ ಹೆಚ್ಚು ಹೋರಾಟವನ್ನು ಮಾಡುತ್ತಾ ಬಂದಿದೆ. ಆದರೂ ನಮ್ಮ ಹೋರಾಟಕ್ಕೆ ಜಯ ಸಿಕ್ಕಿಲ್ಲ. ಕಾನೂನು ಅರಣ್ಯ ವಾಸಿಗಳ ಪರವಾಗಿದೆ.ಸರ್ಕಾರ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಅರಣ್ಯ ವಾಸಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೀಡುವ ದೌರ್ಜನ್ಯವನ್ನು ತಕ್ಷಣ ಸರ್ಕಾರ ನಿಲ್ಲಿಸಬೇಕು.ಯಾವ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಗೆ ತರಬಾರದು. ಅಧಿವೇಶನದಲ್ಲಿ ಈ ಚರ್ಚೆ ನಡೆಸಬೇಕು ಎಂದರು. ಶಾಸಕ ಭೀಮಣ್ಣ ನಾಯ್ಕ,ಕಾರವಾರ ಶಾಸಕ ಸತೀಶ್ ಸೈಲ್,ಸಾಯಿ ಗಾಂವ್ಕರ್,ಸೇರಿ ಸುಮಾರು 5ಸಾವಿರಕ್ಕೂ ಅಧಿಕ ಅರಣ್ಯ ವಾಸಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts