ರೈಲಿಗೆ ಸಿಲುಕಿ ಸಾವಿಗೆ ಶರಣಾದ ತಮಿಳುನಾಡು ಸಚಿವ ದೊರೈ ಮುರುಗನ್ ಸಹೋದರನ ಪುತ್ರಿ​

DMK Minister
Published on

ವೆಲ್ವಾರ್​: ತಮಿಳುನಾಡು ಡಿಎಂಕೆ ಸಚಿವ ದೊರೈ ಮುರುಗನ್​ ಅವರ ಸಹೋದರನ ಪುತ್ರಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆಡಳಿತಾರೂಢ ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡಿನ ಹಾಲಿ ಜಲಸಂಪನ್ಮೂಲ ಸಚಿವ ದೊರೈ ಮುರುಗನ್​ ಅವರ ಹಿರಿಯ ಸಹೋದರ ದೊರೈ ಮಹಾಲಿಂಗಂ ಅವರು ಕಳೆದ ವರ್ಷ ಮೃತಪಟ್ಟಿದ್ದಾರೆ. ಅವರ ಪುತ್ರಿ ಭಾರತಿ (55) ಆಕೆಯ ಪತಿ ರಾಜಕುಮಾರ್​ ಜೊತೆ ವಾಸವಿದ್ದರು. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ದಂಪತಿ ವೆಲ್ವಾರ್​ ಜಿಲ್ಲೆಯ ಕಟ್ಪಾಡಿಯಲ್ಲಿ ನೆಲೆಸಿದ್ದರು.

ಕಟ್ಪಾಡಿ ಹತ್ತಿರದ ಲಾಥೇರಿಯಲ್ಲಿರುವ ರೈಲ್ವೆ ಹಳಿಗಳ ಮೇಲೆ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜೋಳಾರಪೇಟೆ ರೈಲ್ವೆ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದಾಗ ಮೃತಪಟ್ಟಿದ್ದು, ಸಚಿವರ ಸಹೋದರ ಪುತ್ರಿ ಭಾರತಿ ಎಂದು ಗೊತ್ತಾಗಿದೆ.

ಕೌಟುಂಬಿಕ ಸಮಸ್ಯೆಯಿಂದ ಭಾರತಿ ಮೃತಪಟ್ಟಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಸುದ್ದಿ ಇದೀಗ ಡಿಎಂಕೆ ಸಚಿವರ ಕುಟುಂಬವನ್ನು ಆಘಾತಕ್ಕೆ ದೂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net