ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹಿನ್ನಲೆ: ಸಚಿವ ಬಿ. ನಾಗೇಂದ್ರ ಹೇಳಿದ್ದಿಷ್ಟು…

Minister Nagendra
Published on

ಬಳ್ಳಾರಿ: ಸಿದ್ದರಾಮಯ್ಯ ವಿರುದ್ಧ ಬಿ.ಕೆ. ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ ಎಂಬುದರ ಕುರಿತು ಬಳ್ಳಾರಿಯಲ್ಲಿ ಸಚಿವ ಬಿ. ನಾಗೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಬಿ.ಕೆ. ಹರಿಪ್ರಸಾದ್ ಒಬ್ಬ ಹಿರಿಯ ರಾಜಕಾರಣಿ. ಯಾರೋ ಒಬ್ಬರು ಮನಸ್ಸು ಮಾಡಿ ಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಕೆಳಗೆ ಇಳಿಸಲು ಸಾಧ್ಯವಿಲ್ಲ ಎಂದರು.

ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಟಿಪ್ಪಣಿ ಬರುತ್ತೆ ಅದು ಸಾಮಾನ್ಯ. ಬಿ.ಕೆ. ಹರಿಪ್ರಸಾದ್​​​​ ಸಿಎಂ‌ ಸಿದ್ದರಾಮಯ್ಯ ಅವರ ಕುರಿತೇ ಹೇಳಿದ್ದಾರೆ ಎನ್ನುವುದು ಸುಳ್ಳು. ಸಿದ್ದರಾಮಯ್ಯ ರಾಜ್ಯವನ್ನು ಸಾಮೂಹಿಕ ನಾಯಕತ್ವದಲ್ಲಿ ಕೊಂಡೊಯ್ಯುತ್ತಿದ್ದಾರೆ. ದೇವರಾಜ್ ಅರಸುರವರ ನಂತರ ಹಿಂದುಳಿದ ವರ್ಗಗಳ ಸರ್ವೋಚ್ಚ ನಾಯಕ ಸಿದ್ದರಾಮಯ್ಯ. 34 ಜನ ಮಾತ್ರ ಸಚಿವ ಸ್ಥಾನ ನೀಡಲು ಅವಕಾಶವಿದೆ. ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ, ಅದಕ್ಕೆ ಅವರಿಗೆ ಅಸಮಾಧಾನ ಸಾಮಾನ್ಯ. ಬಿ.ಕೆ. ಹರಿಪ್ರಸಾದ್ ಅವರಿಗೆ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಬಲ್ಲರು ಎಂದು ನಾಗೇಂದ್ರ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net