More

    ವಿದ್ಯಾರ್ಥಿಗಳಿಗೆ ‘ಹೆಬ್ಬುಲಿ’ ಹೇರ್ ಸ್ಟೈಲ್ ಮಾಡದಂತೆ ಸಲೂನ್ ಮಾಲೀಕರಿಗೆ ಪತ್ರ ಬರೆದ ಮುಖ್ಯೋಪಾಧ್ಯಾಯರು

    ಬಾಗಲಕೋಟೆ: ವಿದ್ಯಾರ್ಥಿಗಳ ‘ಹೆಬ್ಬುಲಿ’ ಹೇರ್ ಸ್ಟೈಲ್ ನೋಡಿ ಶಿಕ್ಷಕರು ಬೇಸತ್ತು ಹೋಗಿದ್ದು, ಆ ರೀತಿ ಕಟಿಂಗ್ ಮಾಡದಂತೆ ಸಲೂನ್ ಮಾಲೀಕರಿಗೆ ಶಾಲಾ ಮುಖ್ಯೋಪಾಧ್ಯಾಯರು ಮನವಿ ಪತ್ರ ಬರೆದಿದ್ದಾರೆ.

    ವಿದ್ಯಾರ್ಥಿಗಳಿಗೆ 'ಹೆಬ್ಬುಲಿ' ಹೇರ್ ಸ್ಟೈಲ್ ಮಾಡದಂತೆ ಸಲೂನ್ ಮಾಲೀಕರಿಗೆ ಪತ್ರ ಬರೆದ ಮುಖ್ಯೋಪಾಧ್ಯಾಯರು

    ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿಯಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಕುಲಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರು ಪತ್ರ ಬರೆದಿದ್ದಾರೆ. ಶಿವಾಜಿ ನಾಯಕ ಎಂಬ ಮುಖ್ಯ ಶಿಕ್ಷಕರು ಕುಲಹಳ್ಳಿ ಗ್ರಾಮದ ಸಲೂನ್ ಅಂಗಡಿಗಳಿಗೆ ಈ ರೀತಿಯಾಗಿ ಪತ್ರ ಬರೆದಿದ್ದಾರೆ.

    ಇದನ್ನೂ ಓದಿ: ಕಾಮಿಡಿ ದಂತಕಥೆ ಚಾರ್ಲಿ ಚಾಪ್ಲಿನ್ ಪುತ್ರಿ, ನಟಿ ಜೋಸೆಫೀನ್ ನಿಧನ 

    “ನಮ್ಮ ಶಾಲೆಯ ಗಂಡುಮಕ್ಕಳು ಹೆಬ್ಬುಲಿ ಅಥವಾ ಇದೇ ತರಹದ ಹೇರ್ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದಾರೆ. ತಲೆಯ ಒಂದು ಬದಿ ಕೂದಲು ಬಿಟ್ಟು, ಇನ್ನೊಂದು ಬದಿ ಕೂದಲು ಉಳಿಸಿಕೊಂಡು ಕಟಿಂಗ್ ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ‌. ಇದರಿಂದ ವಿದ್ಯಾರ್ಥಿಗಳು ಕಲಿಕೆಗೆ ಆಸಕ್ತಿ ತೋರಿಸುತ್ತಿಲ್ಲ.‌ ಶೈಕ್ಷಣಿಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿಲ್ಲ. ಆದ್ದರಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ‌ ವಿನಂತಿಸುತ್ತೇನೆ. ಒಂದು ವೇಳೆ ವಿದ್ಯಾರ್ಥಿಗಳು “ಹೆಬ್ಬುಲಿ” ಹೇರ್ ಕಟಿಂಗ್ ಮಾಡಲು ಒತ್ತಾಯ ಮಾಡಿದರೆ ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಪಾಲಕರ ಗಮನಕ್ಕೆ ತರುವಂತೆ ತಮ್ಮಲ್ಲಿ ಕೋರುತ್ತೇನೆ” ಎಂದು ಶಿಕ್ಷಕರು ಪತ್ರ ಬರೆದಿದ್ದಾರೆ. ಶಿಕ್ಷಕರ ಈ ಪತ್ರ ಸದ್ಯ ವೈರಲ್ ಆಗಿದೆ.

    ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಬಿಕೆ ಹರಿಪ್ರಸಾದ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts