'ಮಲ್ಹಾರಿ' ಹಾಡಿಗೆ ನಟ ರಣವೀರ್ ಜತೆ ಕೇಂದ್ರ ಸಚಿವರ ಸಖತ್ ಸ್ಟೆಪ್!

1257728
Published on

ದುಬೈನಲ್ಲಿ ನಡೆದ ಇಂಡಿಯಾ ಎಕ್ಸ್‌ಪೋದಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಜೆತೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಆಜಾದಿ ಕಾ ಅಮೃತಮಹೋತ್ಸವದ ನಿಮಿತ್ತ ಇಂಡಿಯಾ ಪೆವಿಲಿಯನ್‌ನಲ್ಲಿ 'ದಿ ಗ್ಲೋಬಲ್ ರೀಚ್ ಆಫ್ ಇಂಡಿಯನ್ ಮೀಡಿಯಾ & ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿ' ಕುರಿತು ಸಂವಾದ ನಡೆಸಲು ಠಾಕೂರ್‌ ಎಕ್ಸ್‌ಪೋಗೆ ಆಗಮಿಸಿದ್ದರು.

ವೇದಿಕೆ ಮೇಲಿದ್ದ ರಣವೀರ್‌ ಮೊದಲು ಒಂದು ಸ್ಟೆಪ್‌ ಹಾಕಿ ಸಚಿವರನ್ನು ಹುರಿ ದುಂಬಿಸಿದರು. ನಂತರ ಠಾಕೂರ್‌ ಬಾಜಿರಾವ್ ಮಸ್ತಾನಿಯ ಹಿಟ್ ಹಾಡು ಮಲ್ಹಾರಿಗೆ ನೃತ್ಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net