ರೆಕಾರ್ಡ್ಸ್​ ಲೈಕ್ಸ್​ ರಾಕಿ: ಕೆಜಿಎಫ್​ 2 ಟ್ರೇಲರ್; 24 ಗಂಟೆಗಳಲ್ಲಿ 10 ಕೋಟಿಗೂ ಅಧಿಕ ವೀಕ್ಷಣೆ!

KGF
Published on

ಬೆಂಗಳೂರು: ನಿನ್ನೆ ಸುಮಾರು ಇಷ್ಟು ಹೊತ್ತಿಗೆ ಅದ್ಧೂರಿಯಾಗಿ ಬಿಡುಗಡೆ ಆಗಿದ್ದ ಕೆಜಿಎಫ್​ 2 ಟ್ರೇಲರ್ 24 ಗಂಟೆಗಳಲ್ಲಿ ಇದೀಗ 10 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡಿರುವುದಲ್ಲದೇ, ಇನ್ನೂ ಭರ್ಜರಿಯಾಗಿಯೇ ಪ್ರತಿಕ್ರಿಯೆಯನ್ನು ಪಡೆಯುತ್ತಲೇ ಇದೆ.

ನಿನ್ನೆ ಬೆಂಗಳೂರಿನ ಮಾಲ್​ವೊಂದರಲ್ಲಿ ಆಯೋಜಿಸಿದ್ದ ಅದ್ಧೂರಿ ವರ್ಣರಂಜಿತ ಕಾರ್ಯಕ್ರಮದಲ್ಲಿ ವಿವಿಧ ಭಾಷೆಗಳ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಕೆಜಿಎಫ್​ 2 ಚಿತ್ರದ ಟ್ರೇಲರನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗಿದ್ದು, ಎಲ್ಲ ಭಾಷೆಗಳಲ್ಲೂ ಸೇರಿ 24 ಗಂಟೆಗಳಲ್ಲಿ ಈ ಟ್ರೇಲರ್ 10 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡಿದೆ.

'ವೈಲೆನ್ಸ್ ವೈಲೆನ್ಸ್ ವೈಲೆನ್ಸ್.. ಐ ಡೋಂಟ್ ಲೈಕ್​ ಇಟ್, ಐ ಅವಾಯ್ಡ್​.. ಬಟ್ ವೈಲೆನ್ಸ್ ಲೈಕ್ಸ್ ಮೀ, ಐ ಕಾಂಟ್ ಅವಾಯ್ಡ್​..' ಎಂದು ಯಶ್ ರಾಕಿಭಾಯ್ ಆಗಿ ಹೇಳುವ ಡೈಲಾಗ್​ವೊಂದು ಈ ಟ್ರೇಲರ್​ನಲ್ಲಿದೆ. ಈಗ ಈ ಟ್ರೇಲರ್​ 10 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡ ಖುಷಿಯನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅದೇ ವೈಲೆನ್ಸ್ ಡೈಲಾಗ್ ಶೈಲಿಯಲ್ಲೇ ಹೇಳಿಕೊಂಡಿದ್ದಾರೆ.

'ರೆಕಾರ್ಡ್ಸ್..​ ರೆಕಾರ್ಡ್ಸ್..​ ರೆಕಾರ್ಡ್ಸ್.. ರಾಕಿ ಡೋಂಟ್ ಲೈಕ್ ಇಟ್.. ಹೀ ಅವಾಯ್ಡ್ಸ್​, ಬಟ್​ ರೆಕಾರ್ಡ್ಸ್ ಲೈಕ್ಸ್​ ರಾಕಿ, ಹೀ ಕಾಂಟ್ ಅವಾಯ್ಡ್ ಇಟ್..' ಎಂದು ಹೇಳಿಕೊಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ಕನ್ನಡ (1.8 ಕೋಟಿ), ತೆಲುಗು (2 ಕೋಟಿ), ಹಿಂದಿ (5.1 ಕೋಟಿ), ತಮಿಳು (12 ಕೋಟಿ) ಹಾಗೂ ಮಲಯಾಳಂ (8 ಕೋಟಿ) ಭಾಷೆಗಳೆಲ್ಲವೂ ಸೇರಿ ಕೆಜಿಎಫ್​-2 ಟ್ರೇಲರ್​ ಒಟ್ಟು 10.9 ಕೋಟಿಗೂ ಅಧಿಕ ವೀಕ್ಷಣೆ ಕಂಡ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net