ಬಾರಕೂರು, ನಾಗರಮಠಕ್ಕೆ ಗಣಿ ಇಲಾಖಾಧಿಕಾರಿಗಳ ಭೇಟಿ

kota-5
Published on

ಕೋಟ: ಇಲ್ಲಿನ ಬಾರಕೂರು, ವಡ್ಡರ್ಸೆ ಗ್ರಾ.ಪಂ, ಸಾಲಿಗ್ರಾಮ ಪಟ್ಟಣಪಂಚಾಯಿತಿ ವ್ಯಾಪ್ತಿ ಹೊಂದಿಕೊಂಡಿರುವ ನಾಗರಮಠ ಹೊಸಾಳ ವೆಂಟೆಡ್ ಡ್ಯಾಮ್ ಸಮೀಪ ಕಳೆದ ಹಲವು ದಿನಗಳಿಂದ ಉಂಟಾಗಿರುವ ಮರಳುಗಾರಿಕೆ ಸಮಸ್ಯೆ ಹಿನ್ನೆಲೆಯಲ್ಲಿ ಗಣಿ ಇಲಾಖಾಧಿಕಾರಿ ಸಂದೀಪ್ ಪಾಟೀಲ್ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಈ ವೇಳೆ ಗ್ರಾಮಸ್ಥರು ತಮ್ಮ ಗ್ರಾಮದ ಹೊಳೆಯಲ್ಲಿ ಮರಳುಗಾರಿಕೆ ನಡೆಸಬಾರದು. ಹೂಳು ತೆರವು ಮಾಡಿ ತಡೆ ದಂಡೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಗಣಿ ಇಲಾಖೆಯ ಸಂದೀಪ್ ಗ್ರಾಮಸ್ಥರಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಕೆಆರ್‌ಐಡಿಎಲ್ ಅಧಿಕಾರಿ ಹೇಮಂತ್, ಗಣಿ ಇಲಾಖೆಯ ಅಶ್ವಿನಿ, ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗಡೆ, ಬಾರಕೂರು ಪಂಚಾಯಿತಿ ಸದಸ್ಯ ಪ್ರವೀಣ್ ನಾಗರಮಠ, ಸ್ಥಳೀಯರಾದ ಶ್ರೀನಿವಾಸ ಹೆಬ್ಬಾರ್, ನಾಗೇಶ್ ನಾಯಕ್, ಕೇಶವ ಕಾಮತ್, ಸುಧೀರ್ ಕಾಮತ್, ಅಶೋಕ್ ಕುಂದರ್, ಬಾಲಕೃಷ್ಣ ಹೆಗ್ಡೆ, ಪ್ರವೀಣ್ ಶೆಟ್ಟಿ ನಾಗರಮಠ, ಅಶೋಕ್ ಅಮೀನ್, ಚಂದ್ರ ಕುಂದರ್, ರಾಘ ಕಾಂಚನ್, ಆಶಾ, ವನಜಾ, ಅಣ್ಣಪ್ಪ ಕುಂದರ್, ಕೃಷ್ಣ ಎನ್.ಬಂಗೇರ, ಜಲಜಾ ಮರಕಾಲ್ತಿ, ಸೀತಾ ಪೂಜಾರಿ, ಬೈಕಡ್ತಿ ಮರಕಾಲ್ತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net