ಹೆಬ್ರಿ: ಹಾಲು ಹಾಗೂ ಹಾಲಿನ ಉತ್ಪನ್ನಕ್ಕೆ ಭಾರಿ ಬೇಡಿಕೆ ಇದೆ. ಅವಿಭಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮಾತ್ರ ಹಾಲಿನ ಉತ್ಪಾದನೆ ಗಣನೀಯ ಇಳಿಕೆಯಾಗಿದೆ. ಸಹಕಾರಿ ಸದಸ್ಯರೆಲ್ಲರೂ ಹಾಲು ಹೆಚ್ಚು ಹೆಚ್ಚು ಉತ್ಪಾದನೆ ಮಾಡಿ ಬೆಳವಣಿಗೆಗೆ ಕಾರಣರಾಗಬೇಕೆಂದು ಕೆಎಂಎಫ್ ಮಂಗಳೂರು ಉಪವ್ಯವಸ್ಥಾಪಕ ಡಾ.ಅನಿಲ್ ಕುಮಾರ್ ಶೆಟ್ಟಿ ಹೇಳಿದರು.
ಹೆಬ್ರಿ ಸಮೀಪದ ಕುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘ ವತಿಯಿಂದ ಗುರುವಾರ ಹೈನುಗಾರಿಕಾ ಅಭಿಯಾನದಲ್ಲಿ ಮನೆಮನೆ ಭೇಟಿ ನೀಡಿ ರೈತರನ್ನು ಸಂಪರ್ಕಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಮಹೇಶ್ ಶೆಟ್ಟಿ ಕಾನ್ಬೆಟ್ ಮಾತನಾಡಿ, ಹಾಲು ಹೆಚ್ಚಳಕ್ಕೆ ಕ್ರಮ ವಹಿಸುವ ನಿಟ್ಟಿನಲ್ಲಿ ಸಂಘದ ವತಿಯಿಂದ ಅಭಿಯಾನ ಕೈಗೊಂಡಿದ್ದೇವೆ. ಸದಸ್ಯರೆಲ್ಲರೂ ಹೆಚ್ಚಳ ಮಾಡಿ ಸಹಕಾರಿ ಬೆಳವಣಿಗೆಯಲ್ಲಿ ಸಹಕಾರ ನೀಡಬೇಕು ಎಂದರು.
ವಿಸ್ತರಣಾಧಿಕಾರಿಗಳಾದ ಅಶ್ವಿನಿ, ಮಂಜುನಾಥ್, ನಿರ್ದೇಶಕರಾದ ಕೃಷ್ಣ ಪೂಜಾರಿ, ಆನಂದ ಶೆಟ್ಟಿ, ರಾಜೀವ್ ಶೆಟ್ಟಿ, ವಿಶ್ವನಾಥ್ ನಾಯ್ಕ, ಸಿಇಒ ಪ್ರಿತ್ವಿನ್ ಎಂ.ರಾವ್, ರೈತರಿದ್ದರು.