

ಬೆಂಗಳೂರು: ಪ್ರತಿ ವಾರ್ಡ್ಗಳಲ್ಲಿ ಹಾಲು ವಿತರಣೆ ಮಾಡುವುದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಕಡ್ಡಾಯವಾಗಿ ಲೊಕೇಷನ್ ಸ್ಟ್ಯಾಂಪಿಂಗ್ ಭಾವಚಿತ್ರ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಪೂರ್ವ ವಲಯದ ಜಂಟಿ ಆಯುಕ್ತೆ ಕೆ.ಆರ್. ಪಲ್ಲವಿ ಸುತ್ತೋಲೆ ಹೊರಡಿಸಿದ್ದಾರೆ. ಲಾಕ್ಡೌನ್ ವೇಳೆ ಕೂಲಿ ಕಾರ್ವಿುಕರು, ಬಡವರು ಹಾಗೂ ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತರಿಸಲಾಗುತ್ತಿದೆ. ಹಾಲು ವಿತರಣೆಗೆ ವಾರ್ಡ್ ವಾರು ನೋಡಲ್ ಅಧಿಕಾರಿ ಮತ್ತು ಸಹಾಯಕರನ್ನು ನೇಮಿಸಲಾಗಿದೆ. ಆದರೆ, ಇವರು ಸ್ಥಳಕ್ಕೆ ಹೋಗದೆ ಖಾಸಗಿ ವ್ಯಕ್ತಿಗಳಿಂದೆ ಹಾಲು ಹಂಚಿಕೆ ಮಾಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಹೀಗಾಗಿ ಅಧಿಕಾರಿಗಳು ಖುದ್ದಾಗಿ ಹಾಲು ವಿತರಣೆ ಸ್ಥಳದ ಭಾವಚಿತ್ರವನ್ನು ಬೆಳಗ್ಗೆ 11 ಗಂಟೆ ಒಳಗಾಗಿ ಪಾಲಿಕೆ ಕಚೇರಿಗೆ ಕಳಿಸುವಂತೆ ಸೂಚನೆ ನೀಡಿದ್ದಾರೆ.
ಫಲಾನುಭವಿಗಳಿಗೆ ಟೋಕನ್: ಹಾಲು ವಿತರಣೆ ವೇಳೆ ಫಲಾನುಭವಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಟೋಕನ್ ನೀಡಿ ಹಾಲು ವಿತರಣೆ ಮಾಡಲು ಚಿಂತನೆ ನಡೆಸಲಾಗಿದೆ. ಆಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ ಎಂದು ಪಾಲಿಕೆ ಆಯುಕ್ತ ಅನಿಲ್ಕುಮಾರ್ ತಿಳಿಸಿದ್ದಾರೆ.