ಲಾಕ್​ಡೌನ್ ಅವಧಿಯಲ್ಲಿ ವಶಪಡಿಸಿಕೊಂಡ ಮದ್ಯದ ಪ್ರಮಾಣ ನೋಡಿದ್ರೆ ಕುಡುಕರಿಗೆ ಗ್ಯಾರೆಂಟಿ ಆಗತ್ತೆ ಶಾಕ್!

liquor
Published on

ಬೆಂಗಳೂರು: ಕರೊನಾ ಸೋಂಕು ತಡೆಗಾಗಿ ಏ.14ರವರೆಗೆ ಲಾಕ್​ಡೌನ್ ಘೋಷಣೆ ಹಿನ್ನೆಲೆಯಲ್ಲಿ ಮದ್ಯ ಕಾಳಸಂತೆ ದಂಧೆಕೋರರ ವಿರುದ್ಧ ಅಬಕಾರಿ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಮಾ. 27 ರಿಂದ ಏ.5ರ ನಡುವೆ ರಾಜ್ಯವ್ಯಾಪಿ 6,915 ಕಡೆಗಳಲ್ಲಿ ದಾಳಿ ನಡೆಸಿ 292 ಪ್ರಕರಣ ದಾಖಲಿಸಿ 123 ಮಂದಿಯನ್ನು ಬಂಧಿಸಲಾಗಿದೆ. 5 ಸಾವಿರ ಲೀಟರ್ ಮದ್ಯ ವಶಕ್ಕೆ ಪಡೆದಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದ್ದರೂ ಕೆಲ ಬಾರ್ ಮತ್ತು ವೈನ್​ಸ್ಟೋರ್​ಗಳಲ್ಲಿದ್ದ ಮದ್ಯವನ್ನು ಕಾನೂನುಬಾಹಿರವಾಗಿ ಕಾಳಸಂತೆ ಮಾರಾಟಗಾರರಿಗೆ ಹೆಚ್ಚಿನ ಬೆಲೆಗೆ ಪೂರೈಕೆ ಮಾಡಲಾಗಿದೆ. ಬಳಿಕ ದಿನಸಿ ಅಂಗಡಿ, ಪೆಟ್ಟಿ ಅಂಗಡಿ ಕೆಲವರು ಮನೆಗಳಲ್ಲಿ ಮದ್ಯವಿಟ್ಟುಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. 1,465 ಲೀ. ಬಿಯರ್, 632 ಲೀ. ವೈನ್ ಸೇರಿ5,021 ಲೀಟರ್ ಮದ್ಯ

ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ವಲಯದಲ್ಲಿ ಅತಿಹೆಚ್ಚು ಕಡೆ (1,841 ದಾಳಿ) ನಡೆಸಲಾಗಿದೆ. 50 ಪ್ರಕರಣ ದಾಖಲಿಸಿ 32 ಮಂದಿಯನ್ನು ಬಂಧಿಸಿ 3,587 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net