

ಟೋಕಿಯೊ: ಚೀನಾದ ಹೆಚ್ಚುತ್ತಿರುವ ಆಕ್ರಮಣಕಾರಿ ನಡೆಯನ್ನು ಸಮರ್ಥವಾಗಿ ಎದುರಿಸಲು ನಾಲ್ಕು ದೇಶಗಳ ಒಕ್ಕೂಟ ಕ್ವಾಡ್ ‘ಸ್ವತಂತ್ರ ಹಾಗೂ ಮುಕ್ತ ಇಂಡೋಪೆಸಿಫಿಕ್’ (ಎಫ್ಒಐಪಿ) ಉಪಕ್ರಮ ಹಿಂದೆಂದಿಗಿಂತಲೂ ಈಗ ಹೆಚ್ಚು ಮಹತ್ವದ್ದಾಗಿದೆ ಎಂದು ಜಪಾನ್ ಪ್ರಧಾನಿ ಯೋಷಿಹಿಡೆ ಸುಗಾ ಹೇಳಿದ್ದಾರೆ. ಕ್ವಾಡ್ ಎಂದು ಕರೆಯಲಾಗುವ ಅಮೆರಿಕ, ಆಸ್ಟ್ರೇಲಿಯಾ, ಭಾರತ, ಜಪಾನ್ಗಳ ಮೈತ್ರಿಕೂಟದ (ಕ್ವಾಡ್) ಶೃಂಗಕ್ಕೆ ಆಗಮಿಸಿರುವ ವಿದೇಶಾಂಗ ಸಚಿವರ ಜೆತೆ ಮಂಗಳವಾರ ನಡೆದ ಸಭೆಯಲ್ಲಿ ಸುಗಾ ಮಾತನಾಡಿದರು.
ಮುಖ್ಯಾಂಶ * ಭಾರತೀಯತೈಲ ನಿಗಮ (ಐಒಸಿಎಲ್) ಮ್ಯಾನ್ಮಾರ್ನಲ್ಲಿ ತೈಲಾಗಾರ ಸ್ಥಾಪನೆಗೆ ಆಸಕ್ತಿ ವ್ಯಕ್ತಪಡಿಸಿದೆ. * ಮ್ಯಾನ್ಮಾರ್ನಲ್ಲಿ ಕಡಿಮೆ ತೈಲಾಗಾರಗಳಿವೆ. ದೇಶೀಯ ಬಳಕೆಗೆ ಆಮದನ್ನೇ ನೆಚ್ಚಿಕೊಂಡಿದೆ. * ಮ್ಯಾನ್ಮಾರ್ ಇಂಧನ ಕ್ಷೇತ್ರದಲ್ಲಿನ ವಿದೇಶಿ ಹೂಡಿಕೆಗಳಲ್ಲಿ ಚೀನಾದ ಪಾಲು ಶೇಕಡ 70ರಷ್ಟಿದೆ.
ಸಾಂಕ್ರಾಮಿಕತೆ ವಿರುದ್ಧ ಹೋರಾಡುವಲ್ಲಿ ಜಾಗತಿಕ ಸಮುದಾಯ ಹಲವು ಬಗೆಯ ಸವಾಲು ಎದುರಿಸುತ್ತಿದೆ. ನಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುವ ಆದಷ್ಟು ಹೆಚ್ಚು ದೇಶಗಳೊಂದಿಗೆ ಸಮನ್ವಯ ಸಾಧಿಸಲು ಇದು ಸಕಾಲ ಎಂದು ಸುಗಾ ಹೇಳಿದರು. ಕರೊನಾ ವೈರಸ್ ಸಾಂಕ್ರಾಮಿಕತೆ ದಾಂಗುಡಿಯಿಟ್ಟ ನಂತರ ಕ್ವಾಡ್ ನಾಯಕರ ಪ್ರಥಮ ಶೃಂಗ ಇದಾಗಿದೆ. ನಾಲ್ಕೂ ದೇಶಗಳ ವಿದೇಶಾಂಗ ಸಚಿವರಾದ ಮೈಕ್ ಪಾಂಪಿಯೊ (ಅಮೆರಿಕ), ಮಾರಿಸ್ ಪೇಯ್ನೆ (ಆಸ್ಟ್ರೇಲಿಯಾ), ಎಸ್. ಜೈಶಂಕರ್ (ಭಾರತ) ಮತ್ತು ತೋಷಿಮಿತ್ಸು ಮೋಟೆಗಿ (ಜಪಾನ್) ಚರ್ಚೆ ನಡೆಸುವರು. ಕರೊನಾ ವೈರಸ್, ವಾಣಿಜ್ಯ, ತಂತ್ರಜ್ಞಾನ, ಹಾಂಕಾಂಗ್, ತೈವಾನ್ ಮತ್ತು ಮಾನವ ಹಕ್ಕುಗಳ ವಿಚಾರದಲ್ಲಿ ಚೀನಾದ ವಿರುದ್ಧ ಟ್ರಂಪ್ ಉರಿದು ಬೀಳುತ್ತಿದ್ದು ಉಭಯ ದೇಶಗಳ ಬಾಂಧವ್ಯದಲ್ಲಿ ಬಿರುಕು ಮೂಡಿದೆ. ಈ ನಡುವೆ, ಭಾರತ ಮತ್ತು ಚೀನಾ ಸಂಬಂಧ ಕೂಡ ಚೆನ್ನಾಗಿಲ್ಲ. ಮೇ ತಿಂಗಳಲ್ಲಿ ಪೂರ್ವ ಲಡಾಖ್ನಲ್ಲಿ ಚೀನಾ ಕ್ಯಾತೆ ತೆಗೆದಿದ್ದರಿಂದ ಉಂಟಾದ ಉದ್ವಿಗ್ನತೆ ಇನ್ನೂ ಶಮನಗೊಂಡಿಲ್ಲ.
ಅನೇಕ ರಂಗಗಳಲ್ಲಿ ಕ್ವಾಡ್ ಸದಸ್ಯ ದೇಶಗಳ ಸಹಕಾರ ನೋಡಿ ಸಂತಸವಾಗಿದೆ. ಇಂಡೋ-ಪೆಸಿಫಿಕ್ ವಲಯದ ಸ್ಥಿರತೆ ಮತ್ತು ಸಮೃಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ. -ಎಸ್. ಜೈಶಂಕರ್, ಭಾರತದ ವಿದೇಶಾಂಗ ಸಚಿವ ಚೀನಾದ ಉಪದ್ರವದ ತೀವ್ರ ಕಳವಳಕಾರಿ. ಈ ವಿಚಾರದಲ್ಲಿ ಸಮಾನ ಮನಸ್ಕ ದೇಶಗಳು ಸಹಕಾರ ಹೆಚ್ಚಿಸಿಕೊಳ್ಳುವುದು ಅಗತ್ಯ ಮೈಕ್ ಪಾಂಪಿಯೊ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ
ಮ್ಯಾನ್ಮಾರ್ ತೈಲಾಗಾರ ಸ್ಥಾಪನೆಗೆ ಭಾರತ ಯೋಜನೆ ಮ್ಯಾನ್ಮಾರ್ ತೈಲ ಕ್ಷೇತ್ರದಲ್ಲಿ ವಿಫುಲ ಅವಕಾಶವಿದ್ದು, ಹೂಡಿಕೆ ಮಾಡಲು ಚೀನಾ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಚೀನಾಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಭಾರತ, ಮ್ಯಾನ್ಮಾರ್ನಲ್ಲಿ -ಠಿ; 44,000 ಕೋಟಿ ರೂಪಾಯಿ (ಆರು ಬಿಲಿಯನ್ ಡಾಲರ್) ವೆಚ್ಚದಲ್ಲಿ ತೈಲ ಸಂಸ್ಕರಣೆ ಸ್ಥಾವರ ಸ್ಥಾಪಿಸುವ ಯೋಜನೆಯೊಂದನ್ನು ಪ್ರಸ್ತಾಪಿಸಿದೆ. ಇದು ಮ್ಯಾನ್ಮಾರ್ನಲ್ಲಿ ಚೀನಾದ ಪ್ರಭಾವ ತಗ್ಗಿಸುವ ಕಾರ್ಯತಂತ್ರವೂ ಆಗಿದೆ.
ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ ಮತ್ತು ಭೂಸೇನೆ ಮುಖ್ಯಸ್ಥ ಎಂ.ಎಂ. ನರಾವಣೆ ಮ್ಯಾನ್ಮಾರ್ಗೆ ನೀಡಿದ್ದು, ಈ ವೇಳೆ ತೈಲ ಕ್ಷೇತ್ರದಲ್ಲಿ ಹೂಡಿಕೆ ಬಗ್ಗೆ ಭಯ ದೇಶಗಳ ಅಧಿಕಾರಿಗಳು ಮಹತ್ವದ ಚರ್ಚೆ ನಡೆಸಿದ್ದಾರೆ. ಯಾಂಗೂನ್ ಸಮೀಪದ ಥನ್ಲಿಯಿನ್ ಪ್ರದೇಶದಲ್ಲಿ ತೈಲಾಗಾರ ಸ್ಥಾಪಿಸುವುದು ಭಾರತದ ಉದ್ದೇಶವಾಗಿದೆ. ಶ್ರಿಂಗ್ಲಾ ಮತ್ತು ನರಾವಣೆ ಮ್ಯಾನ್ಮಾರ್ ಆಡಳಿತಗಾರ್ತಿ ಡಾ ಆಂಗ್ ಸಾನ್ ಸೂ ಕೀ ಹಾಗೂ ಸೇನಾ ಪಡೆಗಳ ಮುಖ್ಯಸ್ಥ ಮಿನ್ ಆಂಗ್ ಹೇಂಗ್ರನ್ನೂ ಭೇಟಿ ಮಾಡಿದ್ದಾರೆ.