ಕುಕ್ಕೆಯ ಭೋಜನ ಪ್ರಸಾದ ಎಸೆದ ವಲಸೆ ಕಾರ್ಮಿಕರು!

kukke sri
Published on

ಸುಬ್ರಹ್ಮಣ್ಯ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಸತಿಗೃಹದಲ್ಲಿ ವಲಸೆ ಕಾರ್ಮಿಕರಿಗೆ ವಸತಿ ಹಾಗೂ ದೇವಸ್ಥಾನದಿಂದ ಉಚಿತ ಭೋಜನ ವ್ಯವಸ್ಥೆ ಮಾಡಲಾಗಿದೆ.

ಆದರೆ ಈ ವಲಸೆ ಕಾರ್ಮಿಕರು ಭೋಜನ ಪ್ರಸಾದಕ್ಕೆ ನೀಡಬೇಕಾದ ಗೌರವವನ್ನು ನೀಡದೇ ಚೆಲ್ಲಿದ ಘಟನೆ ಸೋಮವಾರ ನಡೆದಿದೆ.

ಹೀಗೇಕೆ ಮಾಡಿದಿರಿ ಎಂದು ದೇವಸ್ಥಾನದ ಆಡಳಿತದವರು ಆ ವಲಸೆ ಕಾರ್ಮಿಕರನ್ನು ವಿಚಾರಿಸಿದ್ದಾರೆ. ‘‘ನಾವು ಅನ್ನ ತಿನ್ನುವುದಿಲ್ಲ’’ ಎಂದ ಕಾರ್ಮಿಕರು, ಚಪಾತಿಯ ಬೇಡಿಕೆಯಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರಿಗೆ ಭೋಜನ ಪ್ರಸಾದದ ಬದಲು ಚಪಾತಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಬ್ರಹ್ಮಣ್ಯ ದೇವಳದ ವಸತಿಗೃಹದಲ್ಲಿ ಉಪ್ಪಿನಂಗಡಿಯಿಂದ ಕರೆತಂದು ಆಶ್ರಯ ನೀಡಿದ ಕಾರ್ಮಿಕರು ದೇವರ ಭೋಜನ ಪ್ರಸಾದ ಎಸೆಯುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಈ ಎಲ್ಲ ಕಾರ್ಮಿಕರು ರೈಲಿನಲ್ಲಿ ಮಂಗಳವಾರ ಊರಿಗೆ ತೆರಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net