

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಶುರುವಾಗಿ 90ಕ್ಕೂ ಅಧಿಕ ದಿನಗಳಾಗಿದ್ದು, ದಿನ ಕಳೆದಂತೆ ಶೋ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಬಿಗ್ಬಾಸ್ ಶೋನಲ್ಲಿ ಮೇಜರ್ ಟ್ವಿಸ್ಟ್ ಒಂದು ನಡೆದಿದ್ದು, ಮಿಡ್ವೀಕ್ ಎಲಿಮಿನೇಷನ್ ಮಾಡಲಾಗಿದೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದ್ದು, ಸ್ಟಾಂಗ್ ಸ್ಫರ್ಧಿಯೊಬ್ಬರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.
ಸದ್ಯ ಬಿಗ್ಬಾಸ್ (BiggBoss) ಮನೆಯಲ್ಲಿ ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಧನರಾಜ್, ಹನುಮಂತ, ಚೈತ್ರಾ ಕುಂದಾಪುರ, ಐಶ್ವರ್ಯಾ ಶಿಂಧೋಗಿ, ಮೋಕ್ಷಿತಾ ಪೈ, ಗೌತಮಿ ಹಾಗೂ ಭವ್ಯ ಉಳಿದುಕೊಂಡಿದ್ದು, ಈ 10 ಜನರ ಪೈಕಿ ಒಬ್ಬರು ಕಾಣೆಯಾಗಿದ್ಧಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಮಿಡ್ವೀಕ್ ಎಲಿಮಿನೇಷನ್ ನಡೆದಿದೆ ಎಂದು ಬಹುತೇಕರು ಹೇಳುತ್ತಿದ್ದಾರೆ.
ಕಳೆದ ವಾರ ಬಿಗ್ಬಾಸ್ (BiggBoss) ಮನೆಯಲ್ಲಿ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಅದಕ್ಕೂ ಮುಂಚಿತವಾಗಿ ಶಿಶಿರ್ ಎಲಿಮಿನೇಟ್ ಆಗಿದ್ದರು. ಇದೇ ಸಂಚಿಕೆಯಲ್ಲಿ ಗೋಲ್ಡ್ ಸುರೇಶ್ ಕೂಡ ವೈಯಕ್ತಿಕ ಕಾರಣಗಳನ್ನು ನೀಡಿ ಶೋನಿಂದ ನಿರ್ಗಮಿಸಿದ್ದರು. ಹೀಗಾಗಿ ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಹೀಗಾಗಿ ಸಂಚಿಕೆಯ ಕೊನೆಯಲ್ಲಿ ತ್ರಿವಿಕ್ರಮ್ ಅವರ ಫೇಕ್ ಎಲಿಮಿನೇಷನ್ ಮಾಡಲಾಗಿತ್ತು. ಇದೀಗ ಫಿನಾಲೆಗೆ ಕೆಲವೇ ವಾರಗಳು ಬಾಕಿ ಉಳಿದಿರುವ ನಡುವೆಯೇ ಮಿಡ್ವೀಕ್ ಎಲಿಮಿನೇಷನ್ ನಡೆದಿರುವುದು ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಸ್ಟಾಂಗ್ ಸ್ಫರ್ಧಿಯೊಬ್ಬರು ಮಿಡ್ವೀಕ್ನಲ್ಲಿ ಎಲಿಮಿನೇಟ್ ಆಗಿದ್ದು, ಈ ಕುರಿತು ಬಿಗ್ ಬಾಸ್ ಸಂಚಿಕೆಯ ಮೂಲಕವೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಅಂತಿಮವಾಗಿ ಯಾರು ಎಲಿಮಿನೇಟ್ ಆಗಿದ್ದಾರೆ ಎಂಬುದರ ಕುರಿತು ಪ್ರೇಕ್ಷಕರಿಗೆ ಸ್ಪಷ್ಟವಾಗಲಿದೆ.