More

    ಮೆಟ್ರೋ ಪಿಲ್ಲರ್​ ದುರಂತ: ವರ್ಕ್​ ಫ್ರಂ ಹೋಮ್​ ಒಪ್ಪಿಕೊಂಡಿದ್ದರೆ ಉಳಿಯುತ್ತಿತ್ತೇ ಜೀವ?

    ಬೆಂಗಳೂರು: ಮಂಗಳವಾರ ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿದು ಸಾಫ್ಟ್‌ವೇರ್ ಎಂಜಿನಿಯರ್ ತೇಜಸ್ವಿನಿ (28) ಮತ್ತು ಮಗ ವಿಹಾನ್ (2) ಸಾವಿಗೀಡಾಗಿದ್ದು ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು.

    ಅಪಘಾತದ ಸುದ್ದಿ ಹೊರಬಿದ್ದ ನಂತರ ದುಃಖಿಸುತ್ತಿದ್ದ ತೇಜಸ್ವಿನಿಯ ಅತ್ತೆ ನಿರ್ಮಲಾ “ನಾನು ಅವಳಿಗೆ (ತೇಜಸ್ವಿನಿ) ವರ್ಕ್​ ಫ್ರಂ ಹೋಮ್​ ಮಾಡಲು ಹೇಳಿದ್ದೆ. ಆದರೆ ನನ್ನ ಸೊಸೆ ಒಪ್ಪಲಿಲ್ಲ. ನಿತ್ಯವೂ ಅರ್ಧ ದಿನ ಆಫೀಸಿನಲ್ಲಿ ಕೆಲಸ ಮಾಡಿ ನಂತರ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದು ಕೆಲಸ ಮಾಡುತ್ತಿದ್ದಳು. ಅದರಿಂದಾಗಿ ಇಷ್ಟೆಲ್ಲಾ ಆಗುತ್ತದೆ ಅಂತ ಆಗ ಗೊತ್ತಿರಲಿಲ್ಲ. ನಾನು ಇನ್ನಷ್ಟು ಬಲವಾಗಿ ಒತ್ತಾಯಿಸಿದ್ದರೆ ಆಕೆ ಬದುಕಿರುತ್ತಿದ್ದಳು. ಪ್ಲೇ ಹೋಮ್ ಸೇರಿದ 10 ದಿನಗಳಲ್ಲಿ ನನ್ನ ಮೊಮ್ಮಗ ನನ್ನನ್ನು ಬಿಟ್ಟು ಹೋಗಿದ್ದಾನೆ’ ಎಂದಿದ್ದಾರೆ.

    ತೇಜಸ್ವಿನಿ, ನಿರ್ಮಲಾ ಅವರ ಸಹೋದರನ ಮಗಳಾಗಿದ್ದು, ನಾಲ್ಕು ವರ್ಷಗಳ ಹಿಂದೆ ಲೋಹಿತ್ ಅವರನ್ನು ವಿವಾಹವಾದರು. ನಿವೃತ್ತ ಸರ್ಕಾರಿ ನೌಕರರಾದ ನಿರ್ಮಲಾ ಮತ್ತು ಅವರ ಪತಿ ವಿಜಯ್ ತಮ್ಮ ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts