ರಹಸ್ಯವಾಗಿ ನಡೆದು ಹೋಯಿತಾ ರಾಖಿ ಸಾವಂತ್​ ಮದುವೆ?!

rakhi sawant
Published on

ನವದೆಹಲಿ: ಮನೊರಂಜನಾ ಲೋಕದ ಡ್ರಾಮಾ ಕ್ವೀನ್ ಎಂದೇ ಖ್ಯಾತರಾಗಿರುವ ರಾಖಿ ಸಾವಂತ್ ಬಗ್ಗೆ ಇತ್ತೀಗೆ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ರಾಖಿ ತನ್ನ ಬಾಯ್‌ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಬಗ್ಗೆ ಹೇಳಿಕೊಂಡಾಗಿನಿಂದ ಆಗಾಗ್ಗೆ ಆದಿಲ್ ಜೊತೆ ಕಾಣಿಸಿಕೊಳ್ಳುತ್ತಾರೆ. ಇದೀಗ ಇವರಿಬ್ಬರ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ.

ಈ ನಡುವೆ ರಾಖಿ ಮತ್ತೊಮ್ಮೆ ಮದುವೆಯಾಗಿದ್ದು, ಈ ಬಾರಿ ಆದಿಲ್ ಅವರನ್ನು ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರಿಬ್ಬರ ಚಿತ್ರಗಳು ವೈರಲ್ ಆಗುತ್ತಿದ್ದು, ಒಂದು ಚಿತ್ರದಲ್ಲಿ ಅವರು ನ್ಯಾಯಾಲಯದ ಎದುರು ಮದುವೆ ಪ್ರಮಾಣಪತ್ರವನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ. ರಾಖಿಯ ಇಂತಹ ಫೋಟೋ ನೋಡಿ ಅಭಿಮಾನಿಗಳು ಕೂಡ ಆಶ್ಚರ್ಯ ಪಡುತ್ತಿದ್ದಾರೆ.

ರಾಖಿ ಮತ್ತು ಆದಿಲ್ ಸಂಬಂಧ ಯಾವಾಗಲೂ ಪ್ರಚಾರದಲ್ಲಿತ್ತು. ಸಾರ್ವಜನಿಕವಾಗಿ, ಇಬ್ಬರೂ ಬಹಿರಂಗವಾಗಿ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ಜೋಡಿ ರಿಜಿಸ್ಟರ್ಡ್​ ಮ್ಯಾರೇಜ್ ಆಗಿದ್ದು ಬಳಿಕ ಇಬ್ಬರ ಮೊದಲ ಚಿತ್ರವೂ ಮುನ್ನೆಲೆಗೆ ಬಂದಿದೆ. ಇದರಲ್ಲಿ ಇಬ್ಬರ ಕೊರಳಲ್ಲಿ ಹಾರ ಇರುವುದು ಕಂಡುಬಂದಿದೆ.. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net