ನವದೆಹಲಿ: ಯುವತಿಯರನ್ನು ಗರ್ಭಿಣಿಯಾಗಿಸಲು ಹಣ ನೀಡುವುದಾಗಿ ನಕಲಿ ಜಾಹೀರಾತು ನೀಡಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಏಜಾಜ್ ಮತ್ತು ಇರ್ಷಾದ್ ಬಂಧಿತ ಆರೋಪಿಗಳು. ಹರಿಯಾಣದ ನುಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಬಂಧಿತ ಆರೋಪಿಗಳು, ಮಕ್ಕಳನ್ನು ಹೊಂದಲು ಬಯಸುವ ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡಲು ಪುರುಷರು ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದರು. ಇದಕ್ಕೆ ಬಹುಮಾನವನ್ನೂ ನೀಡುವುದಾಗಿಯೂ ಭರವಸೆ ನೀಡಿದ್ದರು. ಜಾಹೀರಾತಿನೊಂದಿಗೆ ಕೆಲವು ಯುವತಿಯರ ಚಿತ್ರಗಳನ್ನು ಸಹ ಒದಗಿಸಿದ್ದರು. ಈ ಜಾಹೀರಾತು ನೋಡಿ ಸಾವಿರಾರು ಪುರುಷರು ಅರ್ಜಿ ಸಲ್ಲಿಸಿದ್ದರು.
ಜಾಹೀರಾತನ್ನು ನೋಡಿ ಅರ್ಜಿ ಸಲ್ಲಿಸಿದವರು ಆರೋಪಿಗಳನ್ನು ಸಂಪರ್ಕಿಸಿದಾಗ, ನೋಂದಣಿ ಶುಲ್ಕ ಮತ್ತು ಆರಂಭಿಕ ಫೈಲಿಂಗ್ ವೆಚ್ಚವನ್ನು ಸಂಗ್ರಹಿಸಿದರು. ಅನೇಕ ಜನರಿಂದ ಸಾಕಷ್ಟು ಹಣ ಸಂಗ್ರಹಿಸಿದ ಬಳಿಕ ಆರೋಪಿಗಳು ಮತ್ತೆ ಸಂಪರ್ಕಕ್ಕೆ ಸಿಗಲಿಲ್ಲ. ಕೊನೆಗೆ ಮೋಸ ಹೋಗಿರುವುದು ಗೊತ್ತಾದಾಗ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ತನಿಖೆಯ ವೇಳೆ ಆರೋಪಿಗಳ ಕರಾಳ ಮುಖ ಬಯಲಾಗಿದೆ. ಆರೋಪಿಗಳ ಹೆಸರಿನಲ್ಲಿ ನಾಲ್ಕಕ್ಕೂ ಹೆಚ್ಚು ನಕಲಿ ಫೇಸ್ಬುಕ್ ಖಾತೆಗಳು ಹಾಗೂ ಹಲವು ನಕಲಿ ಜಾಹೀರಾತುಗಳು ಪೊಲೀಸರಿಗೆ ಪತ್ತೆಯಾಗಿವೆ. ಆರೋಪಿಗಳನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಯುವತಿಯರನ್ನು ಗರ್ಭಿಣಿ ಮಾಡುವ ಆಸೆಗೆ ಬಿದ್ದ ಪುರುಷರು ಹಣ ಕಳೆದುಕೊಂಡು ದುಃಖಿಸುತ್ತಿದ್ದಾರೆ. (ಏಜೆನ್ಸೀಸ್)
ದೇಹದ ಅಂಗಗಳ ಬಗ್ಗೆ ಅಶ್ಲೀಲವಾಗಿ ಮಾತನಾಡುವುದು… ಸೌಂದರ್ಯದ ಗಣಿ ಹನಿ ರೋಸ್ ಶಾಕಿಂಗ್ ಹೇಳಿಕೆ
ವಿಶ್ವಕಪ್ ಫೈನಲ್ ಕ್ಯಾಚ್ ಅಲ್ಲ ಇದು ನನ್ನ ಜೀವನದ ಮುಖ್ಯ ಕ್ಯಾಚ್! 8 ವರ್ಷ ಹಿಂದಿನ ಘಟನೆ ನೆನೆದ ಸೂರ್ಯ