

ಭೋಪಾಲ್: ಸಾಮಾನ್ಯವಾಗಿ ನಾವು ನೋಡಿರುವಂತೆ ಮನುಷ್ಯರು ತಮ್ಮ ಜನುಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿರುವುದನ್ನು ಅನೇಕ ಬಾರಿ ಕಂಡಿದ್ದೇವೆ. ಆದರೆ, ಶ್ವಾನಗಳ ಬರ್ತ್ಡೇಯನ್ನು ಆಚರಿಸಿರುವ ಸುದ್ದಿಯನ್ನು ನಾವು ಅಲ್ಲೊಮ್ಮೆ ಇಲ್ಲೊಮ್ಮೆ ಕೇಳುತ್ತಿರುತ್ತೇವೆ. ಇದೀಗ ಯುವಕರ ಗುಂಪೊಂದು ತಮ್ಮ ಪ್ರೀತಿಯ ಶ್ವಾನದ ಜನುಮದಿನವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಸದ್ಯ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ರಸ್ತೆಯ ಇಕ್ಕೆಲಗಳಲ್ಲಿ ಲುಡೋ ಭಾಯ್ಗೆ (Ludo Bhai) ಜನುಮದಿನದ ಶುಭಾಶುಗಳು ಎಂದು ಹಾಕಿರುವ ಯುವಕರ ಗುಂಪು ಕಾರು ಹಾಗೂ ಬೈಕಿನಲ್ಲಿ ಶ್ವಾನವನ್ನು ನಗರದ ತುಂಬಾ ಸುತ್ತಾಡಿಸಿ ಪಟಾಕಿ ಸಿಡಿಸಿ ಕೇಕ್ ಕತ್ತಿರಿಸಿ ಸಂಭವ್ರಮಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಯುವಕರ ನಡೆಯನ್ನು ಮೆಚ್ಚಿ ಕಮೆಂಟ್ ಹಾಕುತ್ತಿದ್ದಾರೆ.
ಮಧ್ಯಪ್ರದೇಶದ ದೆವಾಸ್ನಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದ್ದು, ಅನೇಕರು ಯುವಕರ ನಡೆಯನ್ನು ಮೆಚ್ಚಿದ್ದಾರೆ. ಈ ವಿಡಿಯೋ 198k ವೀವ್ಸ್ ಪಡೆದುಕೊಂಡಿದ್ದು, ಅನೇಕರು ಬರ್ತ್ಡೇ ಬಾಯ್ ಲುಡೋಗೆ (Ludo) ಜನುಮದಿನದ ಶುಭಾಶಯ ಕೋರಿ ಕಮೆಂಟ್ ಹಾಕುತ್ತಿದ್ದಾರೆ. ಸದ್ಯ ಈ ವಿಡಿಯೋ ಎಲ್ಲರ ಮನ ಗೆಲ್ಲುತ್ತಿದೆ.