ಪ್ರಶಾಂತ್ ನೀಲ್- ಪ್ರಭಾಸ್ ಕಾಂಬಿನೇಷನ್ 'ಸಲಾರ್​' ಚಿತ್ರದಲ್ಲಿ ಈ ಸ್ಟಾರ್ ನಟ ನಟಿಸುವ ಸಾಧ್ಯತೆ?

Salaar
Published on

ಬೆಂಗಳೂರು: ಇಂಡಿಯನ್ ಸಿನಿಮಾ ಎಂದೇ ಘೋಷಿಸಿಕೊಂಡಿರುವ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡಿದೆ. ಪ್ರಭಾಸ್​ಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸದ್ಯ ಶೂಟಿಂಗ್​ ಸ್ಥಗಿತಗೊಳಿಸಿರುವ ತಂಡ ಇದೀಗ ಹೊಸ ಸುದ್ದಿಯನ್ನು ಹೊತ್ತು ಬಂದಿದೆ. 

ಹೌದು, ಸಲಾರ್ ಸಿನಿಮಾದಲ್ಲಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಚಿರಂಜೀವಿ ಜತೆಗೆ ಒಂದು ಹಂತದ ಮಾತುಕತೆಯೂ ನಡೆದಿದೆ ಎಂದು ತೆಲುಗಿನ ಹಲವು ವೆಬ್​ಸೈಟ್​ಗಳು ವರದಿ ಮಾಡಿವೆ. ಚಿತ್ರದಲ್ಲಿ ಪ್ರಭಾಸ್​ಗೆ ಗಾಡ್​ಫಾದರ್​ ಆಗಿ ಅವರು ಕಾಣಿಸಿಕೊಳ್ಳಲಿದ್ದಾರಂತೆ.

ಇನ್ನೊಂದು ಕಡೆ ಈ ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಚಿರಂಜೀವಿ ವಿಚಾರವಾಗಿ ಚರ್ಚೆಯಲ್ಲಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಇದಷ್ಟೇ ಅಲ್ಲ ರಮ್ಯಾ ಕೃಷ್ಣ ಸಹ ಪ್ರಭಾಸ್ ತಾಯಿಯಾಗಿ ನಟಿಸಲಿದ್ದಾರಂತೆ. ಅಂದಹಾಗೆ ಈ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net