ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ 2025-26ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ, ತರಗತಿ ಕೊಠಡಿ, ಪ್ರಯೋಗಾಲಯ ಉದ್ಘಾಟನಾ ಸಮಾರಂಭ ಶಾಲಾ ಸಭಾಂಗಣದಲ್ಲಿ ಸೋಮವಾರ ಜರುಗಿತು.
ಉದ್ಯಮಿ, ಶಾಲಾ ಹಳೇ ವಿದ್ಯಾರ್ಥಿ ಕಿಶೋರ್ ರೈ ಅವರು ತಾಯಿ ಸ್ಮರಣಾರ್ಥ ನೀಡಿದ ತರಗತಿ ಕೊಠಡಿ, ಪ್ರಯೋಗಾಲಯಗಳ ಉದ್ಘಾಟನೆಯನ್ನು ಅವರ ತಂದೆ ಬೊಡ್ಡಂಗೋಡಿ ಸದಾಶಿವ ರೈ ನೆರವೇರಿಸಿದರು. ಶಾಲೆಗೆ ಪ್ರವೇಶಾತಿ ಪಡೆದ ಮಕ್ಕಳನ್ನು ಬ್ಯಾಡ್ಜ್ ನೀಡಿ ಮೆರವಣಿಗೆ ಮೂಲಕ ಮುಖ್ಯಶಿಕ್ಷಕ, ಶಿಕ್ಷಕ ವೃಂದದವರು ಸ್ವಾಗತಿಸಿದರು.
ಗ್ರಾ.ಪಂ. ಸದಸ್ಯೆ ರುಕಿಯಾ ಸಿದ್ದಿಕ್ ಅಧ್ಯಕ್ಷತೆ ವಹಿಸಿದ್ದರು. ಬೊಡ್ಡಂಗೋಡಿ ಸದಾಶಿವ ರೈ, ಗುರುನಂದನ್ ಮಾತನಾಡಿದರು. ಉಪ್ಪಳದ ಟಾಟಾ ಮೋಟಾರ್ಸ್ ಪ್ರಿ ಪ್ರೈಮರಿ ಮಕ್ಕಳಿಗೆ ನೀಡಿದ ಉಚಿತ ಕಿಟ್‌ಗಳನ್ನು ವಿತರಿಸಲಾಯಿತು. ಕನ್ನಡ ಮಾಧ್ಯಮದಲ್ಲಿ ಪ್ರವೇಶಾತಿ ಪಡೆದ ಮಕ್ಕಳಿಗೆ ಶಿಕ್ಷಕ ವೃಂದ ನೀಡುವ ಉಚಿತ ಬ್ಯಾಗ್ ವಿತರಿಸಲಾಯಿತು.
2024-25ನೇ ಸಾಲಿನ ಎಲ್.ಎಸ್.ಎಸ್.- ಯು ಎಸ್.ಎಸ್. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸ್ಕಾಲರ್‌ಶಿಪ್‌ಗೆ ಅರ್ಹತೆ ಪಡೆದ ಮಕ್ಕಳನ್ನು ಅಭಿನಂದಿಸಲಾಯಿತು. ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ. ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿದರು. ನೌಕರ ಸಂಘದ ಕಾರ್ಯದರ್ಶಿ ರಾಮಚಂದ್ರ ಕೆ.ಎಂ. ವಂದಿಸಿದರು. ಎಲ್‌ಪಿಯಸ್‌ಆರ್‌ಜಿ ಸಂಚಾಲಕ ಸುನೀಲ್ ಕುಮಾರ್ ಎಂ. ನಿರೂಪಿಸಿದರು. ಮಕ್ಕಳಿಂದ ನೃತ್ಯ ಸಿಂಚನ ಮನೋರಂಜನಾ ಕಾರ್ಯಕ್ರಮ ಜರುಗಿತು.