

ಬೆಂಗಳೂರು: ಇದೇ 20ರಂದು ಸಿಎಂ ಸಚಿವರೊಂದಿಗೆ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
20ರಂದ ದೆಹಲಿಗೆ ತೆರಳಲಿರುವ ಸಚಿವರ ಜತೆ 21ರಂದು ರಾಹುಲ್ ಗಾಂಧಿ ಹಾಗು ಮಲ್ಲಿಕಾರ್ಜುನ ಖರ್ಗೆ ಸಭೆ ಕರೆದಿದ್ದಾರೆ. ಈ ಸಂದರ್ಭ, ಆಡಳಿತ ಕಾರ್ಯವೈಖರಿ, ಕುಟುಂಬದ ಹಸ್ತಕ್ಷೇಪ ಹಾಗು ಭ್ರಷ್ಟಾಚಾರದ ಬಗ್ಗೆ ಪಾಠಮಾಡುವ ಸಾಧ್ಯತೆ ಎಂದು ದಿಗ್ವಿಜಯ ನ್ಯೂಸ್ ಮಾಹಿತಿ ನೀಡಿದೆ.
ಬಳಿಕ ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚೆ ಮಾಡುವ ಸಂಪೂರ್ಣ ಸಾಧ್ಯತೆ ಇದ್ದು ಅವಕಾಶ ಸಿಕ್ಕರೆ ಪ್ರಧಾನಿ ಮೋದಿಯನ್ನು ಸಿದ್ದರಾಮುಯ್ಯ ಭೇಟಿ ಮಾಡಲಿದ್ದಾರೆ ಎನ್ನಲಾಗಿದ್ದು ಅವಕಾಶ ಸಿಕ್ಕಲ್ಲಿ ಜಿಎಸ್ಟಿ ಬಾಕಿ, 2700 ಕೋಟಿ ರೂ, ಹಾಗು ತೆರಿಗೆಯಲ್ಲಿ ಪಾಲು ಹೆಚ್ಚಿಸಲು ಕೋರಲಿದ್ದಾರೆ ಎನ್ನಲಾಗಿದೆ.
42 ಶೇಕಡರಷ್ಟು ತೆರಿಗೆ ಪಾಲು ಹೆಚ್ಚಿಸುವಂತೆ ಸಿದ್ದರಾಮಯ್ಯ ಮನವಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕರೊಂದಿಗಿನ ಸಭೆಯ ಜತೆಯಲ್ಲೇ ದೆಹಲಿಯಲ್ಲಿ ರಾಜ್ಯದ ಅನುದಾನಗಳ ಬಗ್ಗೆ ಕೇಂದ್ರ ಹಣಕಾಸು ಸಚಿವರೊಂದಿಗೂ ಚರ್ಚೆ ನಡೆಸಲು ತೆರಳುತ್ತಿದ್ದಾರೆ. ಅದರೊಂದಿಗೆ ಅನ್ನಭಾಗ್ಯ ಯೋಜನೆಯ ಕುರಿತಾಗಿ ಆಹಾರ ಖಾತೆ ಸಚಿವರ ಜತೆಗೂ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ.