

ಬೆಂಗಳೂರು: ಮತಾಂತರ ಕಾಯ್ದೆ ನಿಷೇಧ ಕಾಯ್ದೆ ವಾಪಸ್ಸು, ಪಠ್ಯಪುಸ್ತಕ ಪರಿಷ್ಕರಣೆಯ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಸಿಡಿದೆಳಲಿದ್ದು ರಾತ್ರಿ ಬಿಜೆಪಿ ಕೋರ್ ಕಮಿಟಿ ಹಾಗು ಪ್ರಮುಖರ ಸಭೆ ನಡೆದಿದೆ.
ವರ್ಚುವಲ್ ಸೌಲಭ್ಯಗಳ ಮೂಲಕ ಸಭೆ ನಡೆಸಿದ ಬಿಜೆಪಿ ನಾಯಕರು ಕೋರ್‌ಕಮಿಟಿ ಸದಸ್ಯರು ಸೇರಿದಂತೆ ಪ್ರಮುಖ 40 ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ರಾಜ್ಯ ಸರ್ಕಾರ ಕ್ಯಾಬಿನೆಟ್‍ನಲ್ಲಿ ತೆಗೆದುಕೊಂಡ ನಿರ್ಣಯದ ವಿರುದ್ಧ ಚರ್ಚೆ ನಡೆದಿದ್ದು ಮತಾಂತರ ಕಾಯ್ದೆ, ಎಪಿಎಂಸಿ, ಪಠ್ಯಪುಸ್ತಕ ಹಾಗೂ ವಿದ್ಯುತ್ ದರ ಬಗ್ಗೆ ಹೋರಾಟದ ರೂಪುರೇಶೆಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ಸುಮಾರು 2ಗಂಟೆಗಳ ಕಾಲ ನಡೆದ ಸಭೆಯಲ್ಲಿ ಬಿಜೆಪಿ ನಾಯಕರು ಸದನದ ಒಳಗೂ ಹೊರಗೂ ಈ ಬಗ್ಗೆ ಹೋರಾಟಕ್ಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು ಸರ್ಕಾರದ ನಿರ್ಧಾರಗಳನ್ನೇ ರಾಜಕೀಯ ಅಸ್ತ್ರವನ್ನಾಗಿ ತೆಗೆದುಕೊಳ್ಳಲು ಬಿಜೆಪಿ ಮುಂದಾಗಿರುವ ಸಾಧ್ಯತೆ ಹೆಚ್ಚಿದೆ.
ಮತಾಂತರ ನಿಷೇಧ ಹಾಗು ಪಠ್ಯಪುಸ್ತಕ ಪರಿಷ್ಕರಣೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಪ್ಲಾನ್ ರೂಪಿಸಲಾಗಿದೆ ಎನ್ನಲಾಗಿದ್ದು ಇದರ ವಿರುದ್ಧ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.