ಅಂಬಾನಿ… ಅದಾನಿ ಅಲ್ಲ; ರಾಣಿ ಎಲಿಜಬೆತ್ II ಬಳಸುತ್ತಿದ್ದ ರೇಂಜ್ ರೋವರ್ ಕಾರನ್ನು ಖರೀದಿಸಿದ ಭಾರತೀಯ ಇವರೇ ನೋಡಿ.. | Queen Elizabeth

blur-still-1
Published on

ನವದೆಹಲಿ: ಬ್ರಿಟಿಷ್ ರಾಜಮನೆತನಕ್ಕೆ ಸೇರಿದ ಯಾವುದೇ ವಸ್ತುವನ್ನು ಹರಾಜಿಗೆ ಪಟ್ಟಿಮಾಡಿದಾಗ, ದೊಡ್ಡ ಶ್ರೀಮಂತರು ಅದನ್ನು ಖರೀದಿಸಲು ಭಾಗವಹಿಸುತ್ತಾರೆ. ಕಳೆದ ಕೆಲವು ತಿಂಗಳ ಹಿಂದೆ ಬ್ರಿಟಿಷ್ ರಾಜಮನೆತನದವರು ಬಳಸುತ್ತಿದ್ದ ರೇಂಜ್ ರೋವರ್ ಕಾರನ್ನು ಹರಾಜಿಗೆ ಪಟ್ಟಿ ಮಾಡಲಾಗಿತ್ತು. ಈ ಕಾರನ್ನು ಭಾರತದ ಬಿಲಿಯನೇರ್​ ಒಬ್ಬರು ಖರೀದಿಸಿದ್ದಾರೆ.

ಅಂದ್ಹಾಗೆ ಈ ಕಾರನ್ನು ಬ್ರಾಮ್ಲಿಯ ಹರಾಜುದಾರರ ವೆಬ್‌ಸೈಟ್‌ನಲ್ಲಿ 224,850 ಪೌಂಡ್‌ಗಳ ಬೆಲೆಯೊಂದಿಗೆ ಹರಾಜಿಗೆ ಪಟ್ಟಿ ಮಾಡಲಾಗಿತ್ತು. ಇದು ಸರಿಸುಮಾರು 2.25 ಕೋಟಿ ರೂಪಾಯಿಗೆ ಸಮನಾಗಿರುತ್ತದೆ. ಈ ಕಾರು 2016 ರಿಂದ 17ರ ಅವಧಿಯಲ್ಲಿ ದಿವಂಗತ ಬ್ರಿಟಿಷ್ ರಾಣಿ ಎಲಿಜಬೆತ್ II ರ ರಾಯಲ್ ಹೌಸ್‌ಹೋಲ್ಡ್‌ನ ಫ್ಲೀಟ್‌ನ ಭಾಗವಾಗಿತ್ತು.

ಹರಾಜಿಗೆ ಪಟ್ಟಿ ಮಾಡಲಾಗಿದ್ದ ಈ ರೇಂಜ್ ರೋವರ್ ಕಾರನ್ನು ಭಾರತದ ಬಿಲಿಯನೇರ್​ ಒಬ್ಬರು ಖರೀದಿಸಿದ್ದಾರೆ. ಅದು ಅಂಬಾನಿ ಅಥವಾ ಅದಾನಿ ಇಬ್ಬರಲ್ಲಿ ಒಬ್ಬರೂ ಖರೀದಿಸಿರುತ್ತಾರೆ ಎಂದು ನೀವು ಊಹಿಸುತ್ತಿದ್ದೀರಾ.. ಆದರೆ ನಿಮ್ಮ ಊಹೆ ತಪ್ಪು. ಬ್ರಿಟಿಷ್ ರಾಣಿ ಎಲಿಜಬೆತ್ II ಅವರು ಬಳಸುತ್ತಿದ್ದ ರೇಂಜ್​ ರೋವರ್​ ಕಾರನ್ನು ಪೂನಾವಲ್ಲ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಯೋಹಾನ್ ಪೂನಾವಾಲಾ ಖರೀದಿಸಿದ್ದಾರೆ. ಹರಾಜನ್ನು ಬೈಪಾಸ್ ಮಾಡಿ ಖಾಸಗಿ ಒಪ್ಪಂದದ ಮೂಲಕ ಖರೀದಿಸಿದ್ದಾಗಿ ಸಂದರ್ಶನವೊಂದರಲ್ಲಿ ಸ್ವತಃ ಯೋಹಾನ್​ ಪೂನಾವಾಲಾ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Yohan Poonawalla

ಯೋಹಾನ್ ಪೂನಾವಾಲಾ ಅವರ ಕುರಿತು ಹೇಳುವುದಾದರೆ ಅಪರೂಪದ ಮತ್ತು ವಿಂಟೇಜ್ ಆಟೋಮೊಬೈಲ್‌ಗಳ ಸಂಗ್ರಹ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ಕಲೆಕ್ಷನ್​​​ನಲ್ಲಿ ಒಂದು ಕಾಲದಲ್ಲಿ ಮಹಾರಾಜರು, ಪೋಪ್‌ಗಳು, ನವಾಬರು ಮತ್ತು ಇತರ ಗಮನಾರ್ಹ ವ್ಯಕ್ತಿಗಳಿಗೆ ಸೇರಿದ ಕಾರುಗಳನ್ನು ಒಳಗೊಂಡಿದೆ. ವಿಂಟೇಜ್ ರೋಲ್ಸ್ ರಾಯ್ಸ್, ಕಸ್ಟಮ್ ಫೆರಾರಿಸ್, ಬೆಂಟ್ಲೀಸ್, ಲಂಬೋರ್ಘಿನಿಸ್ ಮತ್ತು ಮರ್ಸಿಡಿಸ್ ಸೇರಿದಂತೆ ವಿವಿಧ ಕ್ಲಾಸಿಕ್ ಮತ್ತು ಐಷಾರಾಮಿ ವಾಹನಗಳು ಯೋಹಾನ್​​ ಪೂನಾವಾಲಾ ಅವರ ಬಳಿ ಇದೆ. ಕತಾರ್‌ನಲ್ಲಿ ನಡೆದ ಜಿನೀವಾ ಇಂಟರ್‌ನ್ಯಾಷನಲ್ ಮೋಟಾರು ಶೋನಲ್ಲಿ ಪೂನಾವಾಲಾ ಅವರ ಕಾರುಗಳ ಮೇಲಿನ ಪ್ರೀತಿಗೆ ‘2023ರ ವರ್ಷದ ಕಲೆಕ್ಟರ್’ ಎಂಬ ಬಿರುದನ್ನು ನೀಡಲಾಗಿದೆ.

ನಾನು ಈ ಹರಾಜಿನ ಬಗ್ಗೆ ಕೇಳಿದಾಗ ತಕ್ಷಣ ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಮಾತನಾಡಿ ಅದನ್ನು ಖರೀದಿಸಲು ನಿರ್ಧರಿಸಿದೆ. ಇದರ ನೋಂದಣಿ ಸಂಖ್ಯೆ OU16 XVH ಎಲಿಜಬೆತ್ II ರ ಸಮಯದಲ್ಲಿ ಇದ್ದಂತೆಯೇ ಇರುತ್ತದೆ. ಈ ಕಾರು 2016ರ ರೇಂಜ್ ರೋವರ್ SDV8 ಆಟೋಬಯೋಗ್ರಫಿ LWB ಆವೃತ್ತಿಯಾಗಿದೆ. ಕಾರಿಗೆ ಮಾಡಿದ ಎಲ್ಲಾ ಮಾರ್ಪಾಡುಗಳನ್ನು ನಾನು ಹಾಗೆಯೇ ಉಳಿಸಿಕೊಳ್ಳುತ್ತೇನೆ ಎಂದು ಪೂನಾವಾಲಾ ಹೇಳಿದರು. ಆದರೆ ಈ ಕಾರಿನ ಬೆಲೆಯನ್ನು ಅವರು ಬಹಿರಂಗಪಡಿಸಿಲ್ಲ. ಆದರೆ ಇದು ಖಾಸಗಿ ವ್ಯವಹಾರವಾಗಿದ್ದು ಅದನ್ನು ಹರಾಜಿನಿಂದ ದೂರವಿಡಲಾಗಿದೆ ಎಂದು ಹೇಳಿದ್ದಾರೆ.

2016ರ ಏಪ್ರಿಲ್‌ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಒಬಾಮಾ ಅವರು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕಾರಿನ ಚಿತ್ರವೊಂದು ಹೊರಬಿದ್ದಿತ್ತು. ಖಾಸಗಿ ಊಟಕ್ಕೆ ವಿಂಡ್ಸರ್ ಕ್ಯಾಸಲ್‌ಗೆ ಆಗಮಿಸಿದ ನಂತರ ಅವರು ಮತ್ತು ದಿವಂಗತ ರಾಜ ಪ್ರಿನ್ಸ್ ಫಿಲಿಪ್ ಅವರೊಂದಿಗೆ ಅದೇ ಕಾರಿನಲ್ಲಿ ಓಡಾಡುತ್ತಿದ್ದರು. ಸಾಮಾನ್ಯವಾಗಿ ಒಂದು ಕಾರು ರಾಜಮನೆತನದಿಂದ ಹೊರಡುವಾಗ ನಂಬರ್ ಪ್ಲೇಟ್ ಬದಲಾಗುತ್ತದೆ. ಆದರೆ ಎಲಿಜಬೆತ್ II ರ ಕೊನೆಯ ದಿನಗಳ ಸಮಯದಲ್ಲಿ ಇದ್ದಂತಹ ಕಾರಿನ ನೋಂದಣಿ ಸಂಖ್ಯೆಯನ್ನು ಬದಲಾಯಿಸಿದೆ ಪೂನಾವಾಲಾ ಅವರಿಗೆ ನೀಡಲಾಗಿದೆ. ಇದು ವಾಹನದ ಐತಿಹಾಸಿಕ ಮೌಲ್ಯವನ್ನು ಹೆಚ್ಚಿಸುತ್ತದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net