More

    ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಶೇನ್ ವಾರ್ನ್ ಮಾಜಿ ಗೆಳತಿ; ಈ ಫಿಲ್ಮ್ ಡೈರೆಕ್ಟ್ ಮಾಡಿದ್ದು ಬೇರಾರೂ ಅಲ್ಲ…ಇವರೇ!

    ಹಾಲಿವುಡ್: ಪ್ರಸಿದ್ಧ ಹಾಲಿವುಡ್ ನಟಿ ಮತ್ತು ದಿವಂಗತ ಕ್ರಿಕೆಟಿಗ ಶೇನ್ ವಾರ್ನ್ ಅವರ ಮಾಜಿ ಗೆಳತಿ ಎಲಿಜಬೆತ್ ಹರ್ಲಿ ಅವರು ತಮ್ಮ ಹೊಸ ಸಿನಿಮಾದೊಂದಿಗೆ ಬೆಳಕಿಗೆ ಬಂದಿದ್ದಾರೆ. ಅವರ ‘ಸ್ಟ್ರಿಕ್ಟ್ಲಿ ಕಾನ್ಫಿಡೆನ್ಶಿಯಲ್’ ಸಿನಿಮಾ ನಿನ್ನೆ ಬಿಡುಗಡೆಯಾಗಿದೆ. 58 ವರ್ಷದ ಎಲಿಜಬೆತ್ ಲೆಸ್ಬಿಯನ್ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಸಾಕಷ್ಟು ಇಂಟಿಮೇಟ್ ದೃಶ್ಯಗಳಿವೆ. ‘ಸ್ಟ್ರಿಕ್ಟ್ಲಿ ಕಾನ್ಫಿಡೆನ್ಶಿಯಲ್’ ಸಿನಿಮಾವನ್ನು  ನಿರ್ದೇಶಿಸಿರುವುದು ಬೇರಾರೂ ಅಲ್ಲ, ನಟಿಯ 21 ವರ್ಷದ ಮಗ ಡಾಮಿಯನ್ ಹರ್ಲಿ. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಾಯಿ-ಮಗನ ಬಗ್ಗೆ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.  

         

    ಸಲಿಂಗಕಾಮ ಧಾರಿ ಸಿನಿಮಾ

    ಮಾಧ್ಯಮ ವರದಿಗಳ ಪ್ರಕಾರ, ಬ್ರಿಟಿಷ್ ನಟಿ ಎಲಿಜಬೆತ್ ಹರ್ಲಿ ತನ್ನ ಮಗ ಡಾಮಿಯನ್ ಹರ್ಲಿಯೊಂದಿಗೆ ಸಲಿಂಗಕಾಮಿ ಸಂಬಂಧದ ಬಗ್ಗೆ ಸಿನಿಮಾ ಮಾಡಲು ಯೋಜಿಸಿದ್ದರು. ಬಹುತೇಕ ಎಲ್ಲಾ ನಟಿಯರೂ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಮಾಡಲು ನಿರಾಕರಿಸಿದಾಗ ಸಮಸ್ಯೆ ಉದ್ಭವಿಸಿದೆ. ನಂತರ ಡಾಮಿಯನ್ ತನ್ನ ಸ್ವಂತ ತಾಯಿ ಎಲಿಜಬೆತ್ ಹರ್ಲಿಯನ್ನು ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕಾಗಿ ಹಾಕಿಕೊಂಡರು.  ಸಿನಿಮಾದಲ್ಲಿ ಎಲಿಜಬೆತ್ ನಟಿ ಪಿಯರೆ ಸಿರ್ವಾರಾ ಅವರೊಂದಿಗೆ ಸಾಕಷ್ಟು ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್

    ‘ಸ್ಟ್ರಿಕ್ಟ್ಲಿ ಕಾನ್ಫಿಡೆನ್ಶಿಯಲ್’ ಸಿನಿಮಾದಲ್ಲಿ ಎಲಿಜಬೆತ್ ಹರ್ಲಿ ಲೆಸ್ಬಿಯನ್ ಅಂದರೆ ಸಲಿಂಗಕಾಮಿ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಯುವತಿಯ ಕಡೆಗೆ ಆಕರ್ಷಿತರಾಗಿ, ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸುತ್ತಾರೆ. ಕೆಲ ದಿನಗಳ ಹಿಂದೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಈ ವಯಸ್ಸಿನಲ್ಲಿ ಈ ರೀತಿಯ ದೃಶ್ಯಗಳನ್ನು ಮಾಡುತ್ತಿರುವುದಕ್ಕೆ ಎಲಿಜಬೆತ್ ಹರ್ಲಿಯನ್ನು ಕೆಲವರು ಟ್ರೋಲ್ ಮಾಡುತ್ತಿದ್ದರೆ, ಕೆಲವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೃತ್ತಿಪರರಾಗಿಯೂ ಇರುವಂತೆ ಸಲಹೆ ನೀಡುತ್ತಿದ್ದಾರೆ.  

    ತಕ್ಕ ಉತ್ತರ ಕೊಟ್ಟ ಎಲಿಜಬೆತ್

    ಮತ್ತೊಂದೆಡೆ, ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಟ್ರೋಲ್ ಮಾಡಿದ ನಂತರ, ನಟಿ ಎಲಿಜಬೆತ್ ಹರ್ಲಿ ಕೂಡ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲರ್‌ಗಳಿಗೆ ತಕ್ಕ ಉತ್ತರ ನೀಡಿದ ಅವರು, “ಇದರಲ್ಲಿ ಏನೂ ಪ್ರಯೋಜನವಿಲ್ಲ ಎಂದು ನಾನು ಭಾವಿಸುವುದಿಲ್ಲ. ಇದು ಅಗತ್ಯವಾಗಿತ್ತು. ಇದು ನನಗೆ ಮಾತ್ರ ಮತ್ತು ನಾನು ನಾನೇ. ಜನರು ಅದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದರೆ, ನಾನು ಅದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ.

    ಚಿತ್ರದ ಕಥೆಯ ಪಾತ್ರವು ಹೇಗೆ ಬೇಡಿಕೆಯಿಡುತ್ತದೆಯೋ ಅದೇ ರೀತಿಯಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದರಲ್ಲಿ ತಪ್ಪೇನಿದೆ ಎಂದು ನನಗನಿಸುವುದಿಲ್ಲ. ಇದು ನಮ್ಮ ಕೆಲಸ. ನಾವು ಈಗಾಗಲೇ ಈ ವಿಷಯವನ್ನು ಚರ್ಚಿಸಿದ್ದೇವೆ ” ಎಂದು ತಿಳಿಸಿದ್ದಾರೆ.

    ‘ಸ್ಟ್ರಿಕ್ಟ್ಲಿ ಕಾನ್ಫಿಡೆನ್ಶಿಯಲ್’ ಚಿತ್ರದ ಮೂಲಕ ಎಲಿಜಬೆತ್ ಬಹಳ ದಿನಗಳ ನಂತರ ಮತ್ತೆ ತೆರೆಗೆ ಬರುತ್ತಿರುವುದು ಗಮನಾರ್ಹ. ಇವರು ಚಲನಚಿತ್ರಗಳಿಂದ ದೂರವಿದ್ದರೂ, ತನ್ನ ಫಿಟ್ನೆಸ್‌ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.

    ಕಿರುತೆರೆ ನಟಿ ಎಂಬ ಕಾರಣಕ್ಕೆ ಅವಾರ್ಡ್ ಫಂಕ್ಷನ್ ನಲ್ಲಿ ಇಂಥದ್ದೆಲ್ಲಾ ಎದುರಿಸಬೇಕಾಯಿತು ಈ ಚೆಲುವೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts