More

    ಕಿರುತೆರೆ ನಟಿ ಎಂಬ ಕಾರಣಕ್ಕೆ ಅವಾರ್ಡ್ ಫಂಕ್ಷನ್ ನಲ್ಲಿ ಇಂಥದ್ದೆಲ್ಲಾ ಎದುರಿಸಬೇಕಾಯಿತು ಈ ಚೆಲುವೆ!

    ಬೆಂಗಳೂರು: ನಟಿ ಎರಿಕಾ ಫರ್ನಾಂಡಿಸ್ ದೀರ್ಘಕಾಲದಿಂದ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕ ಧಾರಾವಾಹಿಗಳು, ಸಿನಿಮಾಗಳು ಮತ್ತು ಮ್ಯುಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ನಿನ್ನಿಂದಲೇ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಬುಗುರಿಯಲ್ಲಿ ನಟಿಸಿದ್ದಾರೆ.     

    ಇತ್ತೀಚಿನ ದಿನಗಳಲ್ಲಿ ಎರಿಕಾ ‘ಲವ್ ಅಧೂರ’ ವೆಬ್ ಸೀರಿಸ್ ನಿಂದ ಸುದ್ದಿಯಲ್ಲಿದ್ದಾರೆ. ಈ ಸೀರಿಸ್ ನಲ್ಲಿ ಕರಣ್ ಕುಂದ್ರಾ ಕೂಡ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಸೀರಿಸ್ ಪ್ರಚಾರದ ಸಂದರ್ಭದಲ್ಲಿ ಎರಿಕಾ ಕಿರುತೆರೆ ನಟಿ ಎಂಬ ಕಾರಣಕ್ಕಾಗಿ ಪ್ರಶಸ್ತಿ ಸಮಾರಂಭಗಳಲ್ಲಿ ತನಗೆ ಹೇಗೆ ತಾರತಮ್ಯ ಮಾಡಲಾಯಿತು ಎಂದು ಹೇಳಿದ್ದಾರೆ.   

    ಹೌದು, ಜನಪ್ರಿಯ ಪ್ರತಿಕೆಯ ಜೊತೆ ನೀಡಿರುವ ಸಂದರ್ಶನದಲ್ಲಿ ಎರಿಕಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. “ನಾನು ತಾರತಮ್ಯವನ್ನು ಎದುರಿಸಿದ್ದೇನೆ. ಅವಾರ್ಡ್ ಫಂಕ್ಷನ್ ಗಳಲ್ಲಿ ಇದನ್ನೆಲ್ಲಾ ನೋಡಿದ್ದೇನೆ. ದೊಡ್ಡವರು ಈ ರೀತಿ ವಾತವರಣ ಸೃಷ್ಟಿಸಿದ್ದಾರೆ. ನಾನು ಅದನ್ನು ಅನುಭವಿಸಿದ್ದೇನೆ. ಹಾಲಿವುಡ್ ನಲ್ಲಿ ಟಿವಿ ಮತ್ತು ಚಲನಚಿತ್ರ ಎರಡನ್ನೂ ಹಾಲಿವುಡ್ ಎಂದು ಕರೆಯಲಾಗುತ್ತದೆ. ಹಾಗಾದರೆ ಇಲ್ಲಿ ಏಕೆ ವ್ಯತ್ಯಾಸವಿದೆ? ನಟರೇ ಆ ಭಿನ್ನತೆಯನ್ನು ಸೃಷ್ಟಿಸಿದ್ದಾರೆ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ” ಎಂದು ತಿಳಿಸಿದ್ದಾರೆ.   

    ಅಂದಹಾಗೆ ಎರಿಕಾ ಫರ್ನಾಂಡೀಸ್ ಮತ್ತು ಕರಣ್ ಕುಂದ್ರಾ ಅವರ ವೆಬ್ ಸರಣಿ ‘ಲವ್ ಅಧೂರ’ ಅಮೆಜಾನ್ ಮಿನಿ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಈ ಸೀರಿಸ್ ನಲ್ಲಿ ಕರಣ್ ಜೊತೆಗಿನ ಎರಿಕಾ ಅವರ ಕೆಮಿಸ್ಟ್ರಿ ವೀಕ್ಷಿಸಲು ಚೆನ್ನಾಗಿರುತ್ತದೆ ಎನ್ನಲಾಗಿದೆ. ಸೀರಿಸ್  ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎರಿಕಾ ಮತ್ತು ಕರಣ್ ಪರಸ್ಪರ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. 

    ಈ ಸೀರಿಸ್ ಅನ್ನು ತನ್ವೀರ್ ಬುಕ್ವಾಲಾ ನಿರ್ದೇಶಿಸಿದ್ದಾರೆ. ಟ್ರೇಲರ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿದೆ. ‘ಲವ್ ಅಧೂರ’ ಒಂದು ಕುತೂಹಲಕಾರಿ ಪ್ರೇಮಕಥೆ. ಇದರಲ್ಲಿ ಇಬ್ಬರು ಪರಸ್ಪರ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಕ್ರಮೇಣ ಈ ಪ್ರೀತಿ ಅಪಾಯಕಾರಿ ಆಟವಾಗಿ ಬದಲಾಗುತ್ತದೆ. ಸೀರಿಸ್ ಕಥೆಯು ಸಾಕಷ್ಟು ವಿಶಿಷ್ಟವಾಗಿದೆ.

    ಈ ಹಿಂದೆ ಅಮೆಜಾನ್ ಮಿನಿ ಟಿವಿಯ ‘ಹಾಂಟಿಂಗ್’ ಸರಣಿಯಲ್ಲಿ ಎರಿಕಾ ಕಾಣಿಸಿಕೊಂಡಿದ್ದರು. ಒಟಿಟಿ ಗಿಂತ ಮೊದಲು, ಎರಿಕಾ ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಎರಿಕಾ ಅವರು ನಟ ಶಾಹೀರ್ ಶೇಖ್ ಅವರೊಂದಿಗೆ ‘ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಇದಲ್ಲದೆ, ಎರಿಕಾ ಅನೇಕ ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. 

    ‘ಪುಷ್ಪ 2’ ಹೊಸ ಪೋಸ್ಟರ್‌ನಲ್ಲಿ ರಶ್ಮಿಕಾ ಈ ನಟನನ್ನು ಕಾಪಿ ಮಾಡಿದ್ದಾರಾ? ಕೊನೆಗೂ ‘ಶ್ರೀವಲ್ಲಿ’ಯೇ ಕೊಟ್ಟ ಉತ್ತರ ಹೇಗಿತ್ತು ನೋಡಿ!  

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts