More

    ‘ಪುಷ್ಪ 2’ ಹೊಸ ಪೋಸ್ಟರ್‌ನಲ್ಲಿ ರಶ್ಮಿಕಾ ಈ ನಟನನ್ನು ಕಾಪಿ ಮಾಡಿದ್ದಾರಾ? ಕೊನೆಗೂ ‘ಶ್ರೀವಲ್ಲಿ’ಯೇ ಕೊಟ್ಟ ಉತ್ತರ ಹೇಗಿತ್ತು ನೋಡಿ!  

    ಬೆಂಗಳೂರು: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’ 2024 ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ ರಶ್ಮಿಕಾ ಮಂದಣ್ಣ ಅವರ 28 ನೇ ಹುಟ್ಟುಹಬ್ಬದಂದು, ನಿರ್ಮಾಪಕರು ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡಿದ್ದರು. ಹೌದು, ಈ ಸಿನಿಮಾದಿಂದ ರಶ್ಮಿಕಾ ಅವರ ಹೊಸ ಲುಕ್  ಹಂಚಿಕೊಳ್ಳಲಾಗಿತ್ತು.

    ಇದರಲ್ಲಿ ರಶ್ಮಿಕಾ ತಮ್ಮ ಸಾಂಪ್ರದಾಯಿಕ ಲುಕ್ ನಿಂದ ಜನರ ಹೃದಯವನ್ನು ಗೆದ್ದಿದ್ದಾರೆ. ಕೆಲವೇ ಸಮಯದಲ್ಲಿ ರಶ್ಮಿಕಾ ಅವರ ಈ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾಯಿತು. ಆದರೆ, ಕೆಲವು ಅಭಿಮಾನಿಗಳು ರಶ್ಮಿಕಾ ಮಂದಣ್ಣ ಅವರ ಈ ಲುಕ್ ಅನ್ನು ಮಹೇಶ್ ಬಾಬು ಸಿನಿಮಾದ ಕಾಪಿ ಎಂದು ಕರೆಯುತ್ತಿದ್ದು, ಈ ಬಗ್ಗೆ ಸ್ವತಃ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.     

    ಮಹೇಶ್ ಬಾಬು ಕಾಪಿ ಮಾಡಿದ್ದಾರಾ ರಶ್ಮಿಕಾ ಮಂದಣ್ಣ?

    ಪುಷ್ಪ 2 ರ ಈ ಫೋಟೋದಲ್ಲಿ, ರಶ್ಮಿಕಾ ಮಂದಣ್ಣ ಹಸಿರು ಸೀರೆ, ಕೈಯಲ್ಲಿ ಹಸಿರು-ಕೆಂಪು ಬಳೆಗಳು, ಸೊಂಟಕ್ಕೆ ಪಟ್ಟಿ, ಮೂಗಿಗೆ ನತ್ತು ಮತ್ತು ಕೊರಳಲ್ಲಿ ಮಂಗಳಸೂತ್ರದ ಜೊತೆಗೆ ನೆಕ್ಲೇಸ್ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಜೊತೆಗೆ ರಶ್ಮಿಕಾ ತನ್ನ ಕೈಗಳ ಮೂಲಕ ಸನ್ನೆ ಮಾಡುತ್ತಾ ಕಿಲ್ಲರ್ ಎಕ್ಸ್‌ಪ್ರೆಶನ್‌ ನೀಡಿದ್ದಾರೆ.   

    ರಶ್ಮಿಕಾ ಅವರ ಈ ಸ್ಟೈಲ್ ಜನರ ಮನ ಗೆಲ್ಲುತ್ತಿದೆ. ಆದರೆ, ರಶ್ಮಿಕಾ ಅವರ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಕೆಲವರು ಇದನ್ನು ಮಹೇಶ್ ಬಾಬು ಅವರ ‘ಗುಂಟೂರು ಕಾರಂ’ ನ ಕಾಪಿ ಎಂದು ಕರೆಯಲು ಪ್ರಾರಂಭಿಸಿದರು. ಅಭಿಮಾನಿಗಳು ಮಹೇಶ್ ಬಾಬು ಅವರ ‘ಗುಂಟೂರು ಕಾರಂ’ ಸಿನಿಮಾದ ಫೋಟೋವನ್ನು ಹಾಗೂ ರಶ್ಮಿಕಾ ಮಂದಣ್ಣ ಅವರ ಈ ಪುಷ್ಪ 2 ರ ಹೊಸ ಫೋಟೋವನ್ನು ಕೊಲಾಜ್ ಮಾಡಿ, ರಶ್ಮಿಕಾ ಅವರ ಹೊಸ ಲುಕ್ ಅನ್ನು ಮಹೇಶ್ ಬಾಬು ಅವರ ಸಿನಿಮಾದಿಂದ ನಕಲಿಸಲಾಗಿದೆ ಎಂದು ಹೇಳಿದ್ದಾರೆ!

    ಇದೀಗ ಈ ಅಭಿಮಾನಿಗಳ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, ‘ಓಹ್, ಗ್ರೇಟ್… ನಾನು ಈ ಕೊಲಾಜ್ ಅನ್ನು ಇಷ್ಟಪಟ್ಟಿದ್ದೇನೆ’ ಎಂದು ಕಾಮೆಂಟ್ ಮಾಡಿದ್ದಾರೆ.  

    ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ನಂತರ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪುಷ್ಪ 2: ದಿ ರೂಲ್’ ನ ಸೀಕ್ವೆಲ್‌ನಲ್ಲಿ ತಮ್ಮ ಪಾತ್ರಗಳನ್ನು ಪುನರಾವರ್ತಿಸಲಿದ್ದಾರೆ. ‘ಪುಷ್ಪ 2’ ಕೂಡ ಈಗ ವಿಶ್ವದ ಬಾಕ್ಸ್ ಆಫೀಸ್‌ನಲ್ಲಿ ಕೋಟಿಗಳ ಬಂಪರ್ ಗಳಿಕೆಗೆ ಸಿದ್ಧವಾಗಿದೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.   

    ರಶ್ಮಿಕಾ ಹುಟ್ಟುಹಬ್ಬದಂದೇ ಫ್ಯಾನ್ಸ್ ಗೆ ಗಿಫ್ಟ್ ಕೊಟ್ಟ ಮೇಕರ್ಸ್..ಶ್ರೀವಲ್ಲಿ ಲುಕ್ ಗೆ ಅಭಿಮಾನಿಗಳು ಥ್ರಿಲ್!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts