'ನಾನು ಮೌಲಾನಾ, ನನಗೆ ಗಡ್ಡ ಬೇಕು, ಹೆಂಡತಿಯಲ್ಲ...' ಎಂದು ತ್ರಿವಳಿ ತಲಾಖ್ ನೀಡಿದ ಗಂಡ! ಜೀವನಾಂಶ ಹಣ ನೀಡಲು ಮನೆ ಮಾರಿಬಿಟ್ಟ..triple talaq

triple talaq
Published on

ಉತ್ತರ ಪ್ರದೇಶ : (triple talaq )  ಸಣ್ಣಪುಟ್ಟ ವಿಷಯಗಳಿಗೆ ದಂಪತಿ ದೂರ ಆಗುವುದರ ಜತೆಗೆ ಅಕ್ರಮ ಸಂಬಂಧಗಳನ್ನು ಹೊಂದುತ್ತಿದ್ದಾರೆ, ಇದರಿಂದಾಗಿ ನಾಗರಿಕ ಸಮಾಜವು ತೊಂದರೆ ಅನುಭವಿಸುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಗಡ್ಡ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಅವನ ಮೇಲೆ ಕೋಪಗೊಂಡ ಬೇರೆಯೊಬ್ಬನ ಜತೆ ಓಡಿ ಹೋಗಿದ್ದಾಳೆ ಎನ್ನುವ  ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಗಡ್ಡಧಾರಿ ಮೌಲಾನಾ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ.

ಲಿಸಾದಿ ಗೇಟ್ ಪ್ರದೇಶದ ಯುವಕ ಮೌಲಾನಾ ಶಕೀರ್ ಆರು ತಿಂಗಳ ಹಿಂದೆ ಅರ್ಷಿ ಎಂಬ ಯುವತಿಯನ್ನು ವಿವಾಹವಾದರು. ಮದುವೆಯಾದ ಮೊದಲ ದಿನದಿಂದಲೇ ಅರ್ಷಿಗೆ ತನ್ನ ಗಂಡನ ಗಡ್ಡದ ಬಗ್ಗೆ ಆಕ್ಷೇಪಣೆಗಳು ಬರಲಾರಂಭಿಸಿದವು. ಅವಳು ಅವನ ಗಡ್ಡವನ್ನು ಬೋಳಿಸಲು ಕೇಳಿಕೊಂಡರೂ, ಶಕೀರ್ ತನ್ನ ಧಾರ್ಮಿಕ ನಂಬಿಕೆಗಳಿಂದಾಗಿ ಅದನ್ನು ಬೋಳಿಸಿಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದನು. ಇದರಿಂದ ಗಂಡ ಹೆಂಡತಿ ನಡುವೆ ಆಗಾಗ್ಗೆ ಜಗಳವಾಗುತ್ತದೆ.

ಈ ಸಂದರ್ಭಗಳಲ್ಲಿ, ಶಕೀರ್ ಬಾಲ್ಯದಿಂದಲೂ ಬೆಳೆಸಿದ್ದ ಗಡ್ಡವನ್ನು ತೆಗೆದಯಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಮನೆಯಲ್ಲಿ ಕ್ಲೀನ್-ಕ್ಷೌರ ಮಾಡಿಕೊಂಡಿರುವ ಭಾವ ಸಬೀರ್ ಕಡೆಗೆ ಆರ್ಷಿ ಆಕರ್ಷಿತಳಾಗುತ್ತಾಳೆ. ಪ್ರತಿದಿನ ಬೆಳಿಗ್ಗೆ ಪತಿ ಶಕೀರ್ ಕೆಲಸಕ್ಕೆ ಹೋದ ನಂತರ ಅವನ ಜತೆ ಕಾಲ ಕಳೆಯುತ್ತಿದ್ದಳು. ಸ್ವಲ್ಪ ಸಮಯದಿಂದ ಸಂಬಂಧದಲ್ಲಿದ್ದ ಇಬ್ಬರೂ ಕೊನೆಗೆ ಮನೆಯಿಂದ ಓಡಿಹೋದರು. ಇದನ್ನು ತಿಳಿದ ಶಕೀರ್, ಅರ್ಷಿಯ ಪೋಷಕರಿಗೆ ವಿಷಯ ತಿಳಿಸಿದಾಗ, ಅವರು ತಮ್ಮ ಮಗಳ ಕೃತ್ಯದಿಂದ ಬೇಸತ್ತು, ಆಕೆಯ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಬಿಟ್ಟರು.

ಮೌಲಾನಾ ಶಕೀರ್ ಅವರ ದೂರಿನ ಆಧಾರದ ಮೇಲೆ, ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಈಗ ಪತಿಯ ಗಡ್ಡ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ  ಬೇರೆಯೊಬ್ಬನ ಜತೆ ಓಡಿಹೋದ ಪತ್ನಿಗೆ ತ್ರಿವಳಿ ತಲಾಖ್ ನೀಡಲಾಗಿದೆ. ಅರ್ಷಿ ತನ್ನ ಪತಿ ಶಕೀರ್ ಜೊತೆ ಅಲ್ಲ, ಬದಲಾಗಿ ತನ್ನ ಭಾವ ಸಬೀರ್ ಜೊತೆ ವಾಸಿಸಲು ಬಯಸುತ್ತಾಳೆ.

ಅವಳು ಹೇಳಿದಳು,,, ನಾನು ನನ್ನ ಸೋದರ ಬಾವನೊಂದಿಗೆ ಕೋರ್ಟ್ ಮದುವೆ ಮಾಡಿಕೊಂಡಿದ್ದೇನೆ. ಸಾಕಷ್ಟು ಗದ್ದಲದ ನಂತರ, ಪತಿ ಶಕೀರ್ ತ್ರಿವಳಿ ತಲಾಖ್ ನೀಡಿ, ನನ್ನ ಗಡ್ಡ ಅವಳಿಗೆ ಇಷ್ಟವಿಲ್ಲ, ಅದು ಅವಳ ಆಸೆ . ಆದರೆ ನಾನು ಮೌಲಾನಾ ಮತ್ತು ನನಗೆ ನನ್ನ ಹೆಂಡತಿಗಿಂತ ನನ್ನ ಗಡ್ಡ ಮುಖ್ಯ ಎಂದಿದ್ದಾನೆ ಎಂದಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಟ್ಟರು. ಒಪ್ಪಂದದಲ್ಲಿ ಮಹಿಳೆ   2.50 ಲಕ್ಷ ರೂ. ಬೇಡಿಕೆ ಇಟ್ಟಿದ್ದಳು. ಮೌಲಾನಾ ತನ್ನ ಮನೆಯ ಪಾಲನ್ನು ಮಾರಿ ಹಣವನ್ನು ನೀಡುವುದಾಗಿ ಹೇಳಿದನು. ಇಬ್ಬರೂ ಇದಕ್ಕೆ ಒಪ್ಪಿಕೊಂಡರು. ವಿಚ್ಛೇದನದ ನಂತರ, ಮಹಿಳೆ ತನ್ನ ಪ್ರಿಯಕರನೊಂದಿಗೆ ತನ್ನ ಹೆತ್ತವರ ಮನೆಗೆ ಹೋದಳು. ಹೀಗೆ ಮೂರು ತಿಂಗಳ ಹಿಂದೆ ಮದ್ವೆ ಆಗಿದ್ದ ಈ ಜೋಡಿ ಸಂಬಂಧ ಮುರಿದು ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net