ಕಿಲೆಂಜಾರು ಶಾಲೆಯಲ್ಲಿ ಕಣ್ಣಿನ ತಪಾಸಣೆ, ಆರೋಗ್ಯ ಶಿಬಿರ

New Project
Published on

ಗುರುಪುರ: ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಮಂಗಳೂರು, ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ ಕುಪ್ಪೆಪದವು, ಶ್ರೀ ದುರ್ಗಾ ಯುವಕ ಮಂಡಲ ಕುಪ್ಪೆಪದವು, ರಾಜ್ಯ ರೈತ ಸಂಘ-ಹಸಿರು ಸೇನೆ ದ.ಕ. ಮಂಗಳೂರು, ವಿದ್ಯಾವರ್ಧಕ ಸಂಘ ಕುಪ್ಪೆಪದವು ಹಾಗೂ ಎಜೆ ಶೆಟ್ಟಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ಗುರುವಾರ ಕಿಲೆಂಜಾರು ಸರ್ಕಾರಿ ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.

ಕೆನರಾ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ರಮೇಶ್ ನಾಯ್ಕ ಶಿಬಿರ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಆರೋಗ್ಯ ಶಿಬಿರದ ಮಹತ್ವ ತಿಳಿಸಿದರು.

ಶಿಕ್ಷಣ ತಜ್ಞ ಭೋಜರಾಜ ಜೈನ್, ಮುಖ್ಯಶಿಕ್ಷಕ ಬಾಬು ಪಿ.ಎಂ., ಶಿಕ್ಷಕರಾದ ಮಾರ್ಕ್ ಮೆಂಡೋನ್ಸ, ಉದಯ ಕುಮಾರ್, ರೈತ ಸಂಘ-ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ದಯಾನಂದ ಶೆಟ್ಟಿ, ಕೆನರಾ ಬ್ಯಾಂಕ್ ನಿವೃತ್ತ ಸಹಾಯಕ ಮಹಾಪ್ರಬಂಧಕ ಗೋವಿಂದ ನಾಯ್ಕ, ಬ್ಯಾಂಕ್ ಅಧಿಕಾರಿ ಸುಶಾಂತ್, ಮೊಗರು ಶಾಖಾಧಿಕಾರಿ ಶಿವಾನಂದ, ಗಂಜಿಮಠ ಬ್ಯಾಂಕ್ ಶಾಖಾಧಿಕಾರಿ ಮನೀಶ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಿರಣ್‌ರಾಜ್, ಎಜೆ ಶೆಟ್ಟಿ ಆಸ್ಪತ್ರೆ ಸುರೇಖಾ ರಾವ್, ಶ್ರೀದುರ್ಗಾ ಯುವಕ ಮಂಡಲ ಅರುಣ್ ಕುಮಾರ್ ಅಂಬೆಲೊಟ್ಟು, ಹರಿಶ್ಚಂದ್ರ, ಚರಿತ್‌ರಾಜ್, ಅಬ್ಬೂಬಕ್ಕರ್ ನೇಲಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶೇಖ್ ಅಬ್ದುಲ್ಲ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳ ಸಹಿತ ಒಟ್ಟು 166 ಮಂದಿ ಶಿಬಿರದ ಪ್ರಯೋಜನ ಪಡೆದರು. 35 ಮಂದಿಗೆ ಕನ್ನಡಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net