ಬಾಲಮಂದಿರದಿಂದ ಪ್ರತಿಭೆಗಳಿಗೆ ಪ್ರೋತ್ಸಾಹ : ಭೂಮಿಪೂಜೆಯಲ್ಲಿ ಸತೀಶ್ ಕುಂಪಲ ಹೇಳಿಕೆ

11
Published on

ಉಳ್ಳಾಲ: ಬಾಲಮಂದಿರವು ಇಪ್ಪತ್ತೆಂಟು ವರ್ಷಗಳಿಂದ ದೇವತಾ ಕಾರ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳ ಆಯೋಜಿಸುತ್ತಲಿದ್ದು, ಹಲವು ಪ್ರತಿಭೆಗಳನ್ನೆ ಬೆಳೆಸಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ನಿವೇಶನ ಕೃಷ್ಣಾಂಗಣದ ಭೂಮಿಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಬಾಲಕೃಷ್ಣ ದೇವರ ಆರಾಧನೆಯ ಮಂದಿರ, ಸಾಂಸ್ಕೃತಿಕ ಭವನದ ಜತೆಗೆ ಕೃಷ್ಣಾಂಗಣವೂ ಸೇರ್ಪಡೆಗೊಂಡಿದೆ ಎಂದರು.

ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ ಶೇಖರ್ ಶಿಲಾನ್ಯಾಸ ನೆರವೇರಿಸಿದರು. ಸಹ್ಯಾದ್ರಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಟಿ.ಸುವರ್ಣ, ಉಮಾಮಹೇಶ್ವರಿ ದೇವಸ್ಥಾನದ ಮೊಕ್ತೇಸರ ದಿನೇಶ್ ಅತ್ತಾವರ, ಉದ್ಯಮಿಗಳಾದ ಸಂಪತ್ ಶೆಟ್ಟಿ, ಪ್ರಕಾಶ್ ತೊಕ್ಕೊಟ್ಟು , ನಿಶಾನ್ ಪೂಜಾರಿ ಬಂಡಿಕೊಟ್ಯ, ಕೃಷಿಕ ಉಮೇಶ್ ಗಾಂಭೀರ್, ರವೀಂದ್ರ ಕುಂಪಲ, ಗಣೇಶ್ ಅಂಚನ್, ಜಗದೀಶ್ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ ಬಿ.ಜೆ ಉಪಸ್ಥಿತರಿದ್ದರು.

ಕೃಷ್ಣ ಪೊನ್ನತ್ತೋಡು ವಂದಿಸಿದರು. ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net